ಖಾಲಿ ಹೊಟ್ಟೆಯಲ್ಲಿ ‘ತುಪ್ಪ’ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು..?

ತುಪ್ಪ ಅಂದರೆ ಸಾಕು ಕೆಲವರು ತುಂಬಾ ಇಷ್ಟ ಪಡ್ತಾರೆ.. ಇನ್ನೂ ಕೆಲವರು ಮುಖ ತಿರುಗಿಸುತ್ತಾರೆ. ಏಕೆಂದರೆ ಎಂದರೆ ಜಿಡ್ಡಿನ ಪದಾರ್ಥ ಇದನ್ನು ತಿಂದರೆ ದಪ್ಪಗಾಗುತ್ತೇವೆ ಎನ್ನುವ ಭಾವನೆ ಬಹುತೇಕ ಮಂದಿಯಲ್ಲಿದೆ. ಬೆಳಗೆದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಅನ್ನೋದು ಗೊತ್ತಾ.. ಒಂದೇ ಎರಡೆ… ಇದರ ಪ್ರಯೋಜನ ಅಪಾರ.
- ಆಯುರ್ವೇದದ ಪ್ರಕಾರ ನೋಡುವುದಾದರೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿನ್ನುವುದರಿಂದ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು. ಜೀವಕೋಶವನ್ನು ಪುನಃ ಶ್ಚೇತನಗೊಳಿಸಬೇಕು ಎಂದಾದರೆ ತುಪ್ಪವನ್ನು ಸೇವಿಸಬೇಕು.
- ತುಪ್ಪ ನೈಸರ್ಗಿಕವಾದ ಲುಬ್ರಿಕೆಂಟ್ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿರುತ್ತದೆ. ಆ ಕಾರಣ ತ್ವಚೆಯಲ್ಲಿರುವ ಶುಷ್ಕತೆಯನ್ನು ಹೋಗಲಾಡಿಸಿ,
- ಸದಾ ಕಾಂತಿ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.
- ಸೋರಿಯಾಸಿಸ್‍ನಂತಹ ಚರ್ಮ ರೋಗಗಳನ್ನು ಕೂಡ ಇದು ತಡೆಗಟ್ಟುತ್ತದೆ.
- ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ನೆನಪಿನ ಶಕ್ತಿ, ಕಲಿಕೆ, ಗ್ರಹಣ ಶಕ್ತಿ, ಮುಂತಾದ ಕಾರ್ಯ ಚಟುವಟಿಕೆಗಳನ್ನು ಸುಧಾರಿಸುತ್ತದೆ.
ಮಾನವನ ದೇಹದಲ್ಲಿರುವ ಕಾಯಿಲೆ ವಿರುದ್ಧ ಹೋರಾಡಬಲ್ಲ ಗುಣ ತುಪ್ಪಕ್ಕೆ ಇದೆ ಹಾಗಾಗಿ ಈ ತುಪ್ಪವನ್ನು ಹೆಚ್ಚೆಚ್ಚು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹದಿಂದ ಕೂಡ ದೂರ ಇರಬಹುದು. ಹಾಗಾಗಿ ಯಾರು ಯಾರು ತುಪ್ಪ ತಿನ್ನುವುದಿಲ್ಲ ಅವರು ತುಪ್ಪ ತಿನ್ನಲು ಶುರು ಮಾಡಿ.
Comments