ಊಟ ಆದ್ಮೇಲೆ ಏಲಕ್ಕಿಯನ್ನ ತಿನ್ನೋದು ಯಾಕೆ ಗೊತ್ತಾ..?
ನಾವು ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಆರೋಗ್ಯಕರ ಅಂಶಗಳು ಅಡಗಿರುತ್ತವೆ. ಏಲಕ್ಕಿಯಲ್ಲೂ ಕೂಡ ಸಾಕಷ್ಟು ಪ್ರಯೋಜನಕಾರಿ ಅಂಶಗಳಿವೆ. ಏಲಕ್ಕಿ ಸಣ್ಣದಾದರು ಇದರ ಉಪಯೋಗಗಳು ಮಾತ್ರ ಲೆಕ್ಕಕ್ಕೆ ಸಿಗದಷ್ಟು. ಸಣ್ಣದಾದ ಏಲಕ್ಕಿಯನ್ನು ನಾವು ಸಾಮಾನ್ಯವಾಗಿ ಆಹಾರದ ಸ್ವಾಧ ಹೆಚ್ಚಿಸಲು ಬಳಸಿಕೊಳ್ಳುವುದು ತಿಳಿದಿರುವ ವಿಚಾರ, ಇದರ ಜೊತೆಗೆ ಹಲವು ರೋಗಗಳ ಶಮನಕ್ಕೆ ಔಷಧಿಯ ರಾಮಬಾಣವಾಗಿರುವುದು ಇದರ ವಿಶೇಷವಾಗಿದೆ.
ನಿಯಮಿತವಾಗಿ ಏಲಕ್ಕಿಯನ್ನು ಸೇವಿಸುವುದರಿಂದ ರೋಗ ನಿರೋಧಕ, ಜೀರ್ಣಶಕ್ತಿ ವೃದ್ಧಿಸಿಸುತ್ತದೆ. ಅಷ್ಟೆ ಅಲ್ಲದೆ ವ್ಯಕ್ತಿಯು ಚೈತನ್ಯಯುಕ್ತವಾಗಿ ಮತ್ತು ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ.. ಅಲ್ಲದೆ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ಊಟದ ಅನಂತರ ಒಂದೆರಡು ಕಾಳು ಏಲಕ್ಕಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಹಾಲಿನಲ್ಲಿ ಏಲಕ್ಕಿ ಹಾಕಿ ಕುದಿಸಿ ಇದಕ್ಕೆ ಸ್ವಲ್ಪ ಜೇನು ಸೇರಿಸಿ. ಪ್ರತಿ ದಿನ ರಾತ್ರಿ ನಿಯಮಿತವಾಗಿ ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಲಕ್ಕಿಯಲ್ಲಿರುವ ರಾಸಾಯನಿಕ ಗುಣದಿಂದಾಗಿ ಶರೀರದಲ್ಲಿರುವ ಫ್ರೀ ರೆಡಿಕಲ್ ಮತ್ತು ಇತರ ವಿಷಯುಕ್ತ ಕಣಗಳು ದೂರವಾಗುತ್ತವೆ. ಇದರಿಂದ ರಕ್ತ ಶುದ್ಧವಾಗುತ್ತದೆ. ಪ್ರತಿ ದಿನ ಏಲಕ್ಕಿ ಸೇವಿಸುವುದರಿಂದ ಆರೋಗ್ಯ ವೃದ್ದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರಿಯಾಗಲಿದೆ.
Comments