ಅತೀ ಹೆಚ್ಚು ನಿದ್ದೆ ಮಾಡ್ತ ಇದ್ದೀರಾ..! ಹಾಗಾದ್ರೆ ಸಾವಿಗೆ ಹತ್ತಿರ ಆಗ್ತಿದ್ದೀರಾ ಅನ್ಸುತ್ತೆ ಹುಷಾರ್..!! ಹಾಗಾದ್ರೆ ಇದನ್ನೊಮ್ಮೆ ಓದಿ

ನಿದ್ರೆ ನಿದ್ರೆ ನಿದ್ರೆ… ಅಪ್ಪಾ..ಕೆಲಸದ ಬ್ಯುಸಿಯಲ್ಲಿ ಮೈಕೈ ಎಲ್ಲಾ ನೋವು ಆರಾಮಾಗಿ ನಿದ್ರೆ ಮಾಡ್ಬೇಕು ಅಂತ ಅನೇಕರು ಊಟ ತಿಂಡಿ ಬಿಟ್ರು ನಿದ್ರೆ ಬಿಡೋದಿಲ್ಲ. ಯಾಕಂದ್ರೆ ದೇಹದ ಆಯಾಸ ಅವರನ್ನ ನಿದ್ರೆಯಲ್ಲಿ ಜಾರಿಸಿಬಿಡುತ್ತೆ. ಹಾಗಂತ ನಾವು ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡಿದ್ರೆ ಆ ನಿದ್ರೆಯೇ ನಮ್ಮ ಸಾವಿಗೆ ಕಾರಣವಾಗಬಹುದು. ಅರೇ ಇದೇನಪ್ಪಾ..? ಹೀಗೆ ಹೇಳ್ತಿದ್ದೀರಿ.. ನಿದ್ರೆ ಮಾಡೋದು ತಪ್ಪೇ..? ಚೆನ್ನಾಗಿ ನಿದ್ರೆ ಮಾಡಿ ಅಂತ ಎಲ್ಲರೂ ಹೇಳ್ತಾರಲ್ಲಾ..? ಹಾಗಾದ್ರೆ ಎಷ್ಟೊತ್ತು ನಿದ್ರೆ ಮಾಡ್ಬೇಕು..? ಅನ್ನೋ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ
ಅಂದಹಾಗೆ, ನೀವು ನಿತ್ಯ ಎಷ್ಟು ಗಂಟೆ ಕಾಲ ನಿದ್ದೆ ಮಾಡ್ತೀರಾ. ನಿಮ್ಮ ನಿದ್ದೆ ಸಮಯ 8 ಗಂಟೆಗೂ ಹೆಚ್ಚು ಕಾಲ ಇದೆಯಾ. ಹಾಗಾದರೆ ನೀವು ಈ ಬಗ್ಗೆ ತಿಳಿದು ಕೊಳ್ಳಲೇಬೇಕು. ಹೌದು, 8 ಗಂಟೆಗೂ ಅಧಿಕ ಕಾಲ ನಿದ್ದೆ ಮಾಡಿದರೆ ಸಾವು ಕೂಡ ನಿಮಗೆ ಬೇಗ ಬರಲಿದೆ ಎಂದು ಸಂಶೋಧನೆ ಯೊಂದು ಹೇಳಿದೆ. ಅಲ್ಲದೇ 8 ಗಂಟೆಗೂ ಅಧಿಕ ಕಾಲ ನಿದ್ದೆ ಮಾಡುವವರಿಗೆ ಹೋಲಿಸಿದಾಗ ಆಯಸ್ಸಿನ ಪ್ರಮಾಣ 8 ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ಹೆಚ್ಚಿರುತ್ತದೆ ಎಂದು ಸಂಶೋಧನೆ ಹೇಳಿದೆ. 3.3 ಮಿಲಿಯನ್ ಮಂದಿ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದು ಇದರಲ್ಲಿ 8 ಗಂಟೆಗೂ ಅಧಿಕ ಸಮಯ ನಿದ್ದೆ ಮಾಡುವವರಿಗೆ ಹೃದಯ ಸಂಬಂಧೀ ಸಮಸ್ಯೆ ಹಾಗೂ ಸ್ಟ್ರೋಕ್ ಸಮಸ್ಯೆ ಎದುರಾಗಲಿದೆ ಎಂದು ತಿಳಿದು ಬಂದಿದೆ. ಅಯ್ಯೋ ಇದೆಲ್ಲಾ ನಿಜಾನಾ..? ಅಂತ ಯೋಚಿಸ್ತಿದ್ದೀರಾ..? ನಿಜಕ್ಕೂ ಇದು ಸತ್ಯ. ಇನ್ಮುಂದಾದ್ರು 8 ಘಂಟೆಗಿಂತ ಕಡಿಮೆ ನಿದ್ರೆ ಮಾಡೋದನ್ನ ಅಭ್ಯಾಸ ಮಾಡಿಕೊಂಡ್ರೆ ಒಳಿತು..
Comments