ಮೊಡವೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ರಾಮಬಾಣ ಈ ಅರಿಶಿಣ..

20 Sep 2018 6:04 PM | Health
1228 Report

ಅರಿಶಿಣ ಒಳ್ಳೆಯ ಆ್ಯಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಹಾಗೆಯೇ ಇದರಲ್ಲಿ ಪೈಬರ್ ಮುಖ್ಯವಾಗಿ ಪ್ರೋಟೀನ್, ಕ್ಯಾಲ್ಷಿಯಂ, ಕಾಪರ್, ಐರನ್, ಮೆಗ್ನೀಸಿಯಂ, ಜಿಂಕ್, ವಿಟಮಿನ್ ಸಿ, ಕೆ, ಗಳು ಸಂವೃದ್ಧವಾಗಿವೆ. ಅರಿಶಿಣ ಅಂದಕ್ಕೆ ಅಷ್ಟೇ ಅಲ್ಲ ಆರೋಗ್ಯಕ್ಕೂ ತುಂಬಾ ಉಪಯುಕ್ತ ವಸ್ತು ಎಂದು ನಮಗೆ ಗೊತ್ತು.

ಬಾಯಿಯ ಸ್ವಚ್ಛತೆ: ಅಂದಹಾಗೆ, ಬಾಯಿಯಲ್ಲಿ ಬರುವ ಅಲಸರ್ ಅನ್ನು ಕಡಿಮೆ ಮಾಡುವುದರಲ್ಲಿ ಅರಿಶಿಣದ ಪಾತ್ರ ಮಹತ್ತರವಾದದ್ದು. ಇದಕ್ಕಾಗಿ ಮೊದಲು ಒಂದು ಚಮಚ ಅರಿಶಿಣದಲ್ಲಿ ಅರ್ಧ ಚಮಚ ನೀರು, ಅರ್ಧ ಚಮಚ ಕೊಬ್ಬರಿ ಎಣ್ಣೆಯನ್ನು ಕಲಸಬೇಕು‌ ಆ ನೀರನ್ನು ಸ್ವಲ್ಪ ಸಮಯದವರಗೆ ಬಾಯಿಯಲ್ಲಿ ಇಟ್ಟುಕೊಂಡು ಆನಂತರ ಮುಕ್ಕಳಿಸಿದರೆ ಸರಿಹೋಗುತ್ತದೆ.

ಅರಿಶಿಣದ ಹಾಲು: ನೆಗಡಿ, ಕೆಮ್ಮು ಹೆಚ್ಚು ಇದ್ದಾಗ ಚನ್ನಾಗಿ ಕುದಿಸಿದ ಹಾಲಿನಲ್ಲಿ ಅರ್ಧ ಚಮಚ ಅರಿಶಿಣ ಪುಡಿಯನ್ನು ಹಾಕಿ ಸ್ವಲ್ಪ ಬಿಸಿ ಇರುವಾಗಲ್ಲೇ ಕುಡಿದರೆ ಕೆಮ್ಮು ನೆಗಡಿಯಿಂದ ಬೇಗ ಉಪಶಮನ ಪಡೆಯಬಹುದು.

ತೂಕ ಕಡಿಮೆ ಮಾಡಿಕೊಳ್ಳಲು: ಶರೀರದಲ್ಲಿನ ತೂಕವನ್ನು ಕಡಿಮೆ ಮಾಡುವಲ್ಲಿ ಚನ್ನಾಗಿ ಕೆಲಸ ಮಾಡುತ್ತದೆ. ಒಂದು ಗ್ಲಾಸ್ ನೀರಿನ್ನು ಕುದಿಸಿ ಅದರಲ್ಲಿ ಅರ್ಧ ಚಮಚ ಅರಿಶಿಣ, ಅರ್ಧ ಚಮಚ ಶುಂಠಿರಸವನ್ನು ಹಾಕಬೇಕು. ಈ ಜ್ಯೂಸ್ ಅನ್ನು ಬೆಳಗ್ಗೆ ಎದ್ದ ತಕ್ಷಣ ಕುಡಿದರೆ ತೂಕ ಬೇಗ ಕಡಿಮೆಯಾಗುತ್ತದೆ.

ತುರಿಕೆ: ಚರ್ಮದ ತುರಿಕೆಗೆ ಎಷ್ಟೋ ತರದ ಔಷಧಿಗಳನ್ನು ಬಳಸುತ್ತೇವೆ. ಅದರ ಬದಲಿಗೆ ಮನೆಯಲ್ಲಿಯೇ ಔಷಧಿಯನ್ನು ತಯಾರಿಸಿಕೊಂಡರೆ ಯಾವುದೇ ರೀತಿಯ ಸೈಡ್ಎಫೆಕ್ಟ್ ಇರುವುದಿಲ್ಲ. ಒಂದು ಚಮಚ ಅಲೋವೆರಾ ಜೆಲ್ ಅನ್ನು ಕಲಸಿ ತುರಿಕೆಯಿರುವ ಜಾಗದಲ್ಲಿ ಹಚ್ಚಬೇಕು. ಹೀಗೆ ಮಾಡಿದರೆ ತುರಿಕೆ ಬೇಗ ಕಡಿಮೆಯಾಗುತ್ತದೆ.

ಮೊಡವೆಗಳು: ಚರ್ಮವನ್ನು ಆರೋಗ್ಯವಾಗಿ, ಸುಂದರವಾಗಿಡುವುದರಲ್ಲಿ ಅರಿಶಿಣ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ಮೊಡವೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಮಚ್ಚೆಗಳು ಬರದಂತೆ ರಕ್ಷಿಸುತ್ತದೆ. ಒಂದು ಚಮಚ ಅರಿಶಿಣದಲ್ಲಿ ಅರ್ಧ ಚಮಚ ಜೇನುತುಪ್ಪ ಕಲಸಿ ಮುಖಕ್ಕೆ ಹಚ್ಚಬೇಕು. ಹತ್ತು ನಿಮಿಷಗಳ ನಂತರ ತಂಪಾದ ನೀರಿನಲ್ಲಿ ತೊಳೆಯಬೇಕು.

ಒಟ್ಟಾರೆ ಹೇಳೋದಾದ್ರೆ ಈ ಅರಿಶಿಣದಿಂದ ಅದೆಷ್ಟೋ ಕಾಯಿಲೆಗಳನ್ನ ದೂರ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ

Keywords:turmeric powder, turmeric powder for skin, turmeric powder for face, turmeric powder uses for health, turmeric powder tips for skin

Edited By

Manjula M

Reported By

Manjula M

Comments