ಮಾತ್ರೆಯನ್ನು ಯಾವುದರ ಜೊತೆ ತೆಗೆದುಕೊಂಡರೆ ಉತ್ತಮ ಅನ್ನೋದು ಗೊತ್ತಾ..?

ಈಗಿನ ಕಾಲದಲ್ಲಂತೂ ಏನೇ ಅನಾರೋಗ್ಯ ಉಂಟಾದ್ರು ಮಾತ್ರೆ ತೆಗೆದುಕೊಳ್ಳೋದು ಸಹಜ ಅಭ್ಯಾಸವಾಗಿಬಿಟ್ಟಿದೆ. ತಲೆನೋವು, ಜ್ವರ, ನೆಗಡಿ, ಏನೇ ಬರ್ಲಿ ಮಾತ್ರೆಯೊಂದಿದ್ರೆ ಸಾಕು ಇನ್ನೇನು ಬೇಡ ಅಂತಾರೆ ಯುವಜನ. ಹಾಗಾದ್ರೆ ಮಾತ್ರೆಯನ್ನು ಯಾವುದರ ಜೊತೆ ಸೇವಿಸಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಮೂಡೋದು ಸಹಜ.ಕೆಲವರು ನೀರಿನ ಜೊತೆ ಮಾತ್ರೆ ಸೇವಿಸಿದ್ರೆ ಮತ್ತೆ ಕೆಲವರು ಜ್ಯೂಸ್ ಬಳಸ್ತಾರೆ.
ಮಾತ್ರೆ ಕಹಿಯಾಗಿರುವುದರಿಂದ ಜ್ಯೂಸ್ ಜೊತೆ ಸೇವನೆ ಮಾಡಿದ್ರೆ ಆ ಕಹಿ ಗೊತ್ತಾಗುವುದಿಲ್ಲ ಎನ್ನುವ ಕಾರಣಕ್ಕೆ ಅನೇಕರು ಜ್ಯೂಸ್ ಬಳಸ್ತಾರೆ. ಆದ್ರೆ ಮಾತ್ರೆ ಸೇವನೆಗೆ ಯಾವುದು ಬೆಸ್ಟ್ ಅಂತಾ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹೇಳಿದೆ., ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರಕಾರ ಮಾತ್ರೆ ಸೇವನೆಗೆ ನೀರು ಅತ್ಯುತ್ತಮ. ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ಮಾತ್ರೆ ಜೊತೆ ಜ್ಯೂಸ್ ಸೇವನೆ ಮಾಡಬಾರದು. ಕಿತ್ತಳೆ ಹಾಗೂ ಸೇಬು ಹಣ್ಣಿನ ಜ್ಯೂಸ್ ಕೂಡ ದೇಹದೊಳಗೆ ಮಾತ್ರೆ ಪ್ರಭಾವ ಬೀರುವುದನ್ನು ತಡೆಯುತ್ತದೆ.ಸಂಶೋಧನೆಯೊಂದರ ಪ್ರಕಾರ ದ್ರಾಕ್ಷಿ, ಕಿತ್ತಳೆ ಹಾಗೂ ಸೇಬು ಹಣ್ಣಿನ ಜ್ಯೂಸ್ ಗಳು ಕ್ಯಾನ್ಸರ್ ಔಷಧಿಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆಯಂತೆ. ಹಾಗಾಗಿ ಮಾತ್ರೆ ಸೇವನೆ ವೇಳೆ ನೀರನ್ನು ಮಾತ್ರ ಸೇವಿಸಿ ಎನ್ನುತ್ತಾರೆ ವೈದ್ಯರು.ಇನ್ನು ಇದನ್ನ ಎಲ್ಲರೂ ತಿಳಿದುಕೊಳ್ಳಬೇಕಾದಂತಹ ವಿಚಾರ ಆದ್ದರಿಂದ ಇದನ್ನ ನಿಮ್ಮವರಿಗೂ ಶೇರ್ ಮಾಡಿ ಎಲ್ಲರಿಗೂ ತಿಳಿಸಿ
Comments