ಮೊಸರಿಗಿಂತ ಮಜ್ಜಿಗೆಯೇ ಆರೋಗ್ಯಕ್ಕೆ ಒಳ್ಳೆಯದು..!?

ಸಾಮಾನ್ಯವಾಗಿ, ಹಿಂದಿನ ಕಾಲದಲ್ಲಿ ಪ್ರತೀ ಊರಿನಲ್ಲೂ ಪ್ರತೀ ಮನೆಯಲ್ಲೂ ಲೆಕ್ಕವಿಲ್ಲದಷ್ಟು ಹಸು, ಎಮ್ಮೆಗಳು ಎಷ್ಟೇ ಇದ್ದರೂ, ಮಡಿಕೆಯ ತುಂಬಾ ಮೊಸರಿದ್ದರೂ ಮೊಸರನ್ನು ಬಳಸುತ್ತಿರಲಿಲ್ಲ. ಪ್ರತಿದಿನ ಮುಂಜಾನೆ ಮೊಸರನ್ನು ಕಡಿದು ಬೆಣ್ಣೆ ತೆಗೆದು ನಂತರ ಆ ಮೊಸರಿಗೆ ನೀರನ್ನು ಬೆರೆಸಿ ತೆಳುವಾದ ಮಜ್ಜಿಗೆಯನ್ನು ತಯಾರಿಸಿ ಉಪಯೋಗಿಸುತ್ತಿದ್ದರು. ಈ ವಿಷಯವು ನಮ್ಮಲ್ಲರಿಗೂ ತಿಳಿದಿರುವುದೇ. ಅಲ್ಲದೆ ಮನೆಗೆ ಯಾರಾದರೂ ಬಂದರೆ ಮಡಿಕೆಯಲ್ಲಿನ ಮಜ್ಜಿಗೆಯನ್ನು ಕೊಡುತ್ತಿದ್ದರು.
ದಾನಿಗಳು ಸ್ಥಾವರದಲ್ಲಿ ಮಜ್ಜಿಗೆಯನ್ನು ಮಡಿಕೆಯಲ್ಲಿಟ್ಟು ಪಾದಚಾರಿಗಳಿಗೆ ಕೊಡುತ್ತಿದ್ದರು. ಮೊಸರಿಗಿಂತ ಮಜ್ಜಿಗೆ ಒಳ್ಳೆಯದೆಂದು ನಮ್ಮ ಪೂರ್ವಜರು ತಿಳಿಸಿಕೊಟ್ಟಿದ್ದಾರೆ. ನೀರಿನಂತಹ ಮಜ್ಜಿಗೆಯನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನೆಂದು ನೀವು ತಿಳಿದುಕೊಳ್ಳಿ ಅಂದಹಾಗೆ, ಇಂದಿನ ದಿನಗಳಲ್ಲಿ ಸುಮಾರು ಶೇ.90 ರಷ್ಟು ಮಂದಿ ಮಜ್ಜಿಗೆಯನ್ನು ಬಳಸುವುದನ್ನೇ ನಿಲ್ಲಿಸಿ, ಪ್ರತಿದಿನ ಎರಡು ಹೊತ್ತೂ ಮೊಸರನ್ನೇ ಬಳಸುತ್ತಿದ್ದಾರೆ. ಮೊಸರು ಕಡಿದು ಬೆಣ್ಣೆ ತೆಗೆದು ಮಜ್ಜಿಗೆಯನ್ನು ಮಾಡುವುದಕ್ಕೆ ಸಮಯ ಬೇಕಾಗುತ್ತದೆ ಎಂದು ಸಮಯವನ್ನು ಹಾಳು ಮಾಡದೆ ಅನ್ನಕ್ಕೆ ಮೊಸರನ್ನು ಬಳಸುವುದು ನಾಗರಿಕತೆ ಎಂದು ಹಿಗ್ಗುತ್ತಿದ್ದಾರೆ. ಆದ್ರೆ, ಮೊಸರು ತಿನ್ನುವುದರಿಂದ ಆಯಸ್ಸು ಕ್ಷೀಣಿಸುತ್ತದೆ. ಮುಖ್ಯವಾಗಿ ರಾತ್ರಿ ಸಮಯದಲ್ಲಿ ಬಳಸಬಾರದು. ಹಾಗೆ ಬಳಸಿದಲ್ಲಿ ಹೊಟ್ಟೆಯಲ್ಲಿ ವಾಯು ಹೆಚ್ಚಾಗಿ ವಾತ ರೋಗಗಳು ಬರುತ್ತವೆ ಎಂದು ಆಯುರ್ವೇದ ದಲ್ಲಿ ಒತ್ತಿ ಹೇಳಿದ್ದರೂ ಸಹ ಮೈ ಬಗ್ಗಿಸಿ ಕೆಲಸ ಮಾಡುವ ತಾಳ್ಮೆ ಇಲ್ಲದೆ ಸೋಮಾರಿಗಳಾಗಿ ಮಜ್ಜಿಗೆಯನ್ನು ಬಳಸುವುದಕ್ಕಿಂತ ಮೊಸರಿಗೇ ಪ್ರಾಧಾನ್ಯತೆ ನೀಡುತ್ತಿದ್ದೇವೆ. ಅದೇನೆ ಆಗ್ಲಿ ಮೊಸರಿಗಿಂತ ಮಜ್ಜಿಗೆಯೇ ಉತ್ತಮ ಅನ್ನೋದನ್ನ ತಿಳಿದಮೇಲೂ ಅತಿಯಾಗಿ ಮೊಸರನ್ನೇ ಬಳಸುತ್ತೇವೆ ಅನ್ನೋದು ದಡ್ಡತನ. ಇನ್ಮುಂದಾದ್ರು ಮೊಸರಿನ ಬದಲಿಗೆ ಮಜ್ಜಿಗೆಯ್ನೇ ಬಳಸಿ ಆರೋಗ್ಯದಿಂದಿರಿ…
Comments