ಜೀರಿಗೆಯನ್ನು ಪ್ರತಿದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ತಿಂದರೆ ಆಗುವ ಉಪಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಜೀರಿಗೆಯನ್ನು ನಾವು ಕೇವಲ ಸಾಂಬಾರ ಪದಾರ್ಥಗಳಲ್ಲಿ ಒಂದು ಎಂದು ಸುಮ್ಮನಾಗುತ್ತೇವೆ ಆದರೆ ಈ ಜೀರಿಗೆ ಒಂದು ಅತ್ಯತ್ತಮ ಔಷಧಿಯೂ ಹೌದು..ಎಲ್ಲರೂ ತಮ್ಮ ತೂಕವನ್ನು ಇಳಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ, ಆದರೆ ಅವರಿಗೆ ಜೀರಿಗೆಯ ಉಪಯೋಗ ತಿಳಿದರೆ ಕೆಲವೇ ದಿನಗಳಲ್ಲಿ ಸಣ್ಣಗಾಗುತ್ತಾರೆ. ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಜೀರಿಗೆಯನ್ನು ತಿಂದರೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಲಿದೆ.
ಯಾರು ಸಣ್ಣಗಾಗಬೇಕು ಎಂದಿದ್ದಾರೋ ಅವರು ಬೆಳಗ್ಗೆದ್ದ ಕೂಡಲೆ 10 ಗ್ರಾಂ ನಷ್ಟು ಜೀರಿಗೆಯನ್ನ ನೀರಿಗೆ ಹಾಕಿ ಕಾಯಿಸಿ ಕುಡಿದರೆ ಅದ್ಬುತವಾದ ಆರೋಗ್ಯ ಲಾಭಗಳು ನಮ್ಮದಾಗುವುದರ ಜೊತೆಗೆ ಅನವಶ್ಯಕ ಕೊಬ್ಬು ಕರಗಿ ದೇಹ ಶಕ್ತಿಯುತವಾಗುತ್ತದೆ.ಹೀಗೆ ಬೆಳಗ್ಗೆ ಎದ್ದ ಕೂಡಲೇ ಮಾಡುವುದರಿಂದ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶವನ್ನು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಮಧುಮೇಹ ಇರುವವರು ಪ್ರತಿನಿತ್ಯ ಸೇವಿಸಿದರೆ ಒಳ್ಳೆಯದು. ಒಂದು ಚಮಚ ಜೀರಿಗೆಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ನಮ್ಮ ದೇಹದಲ್ಲಿನ ಚರ್ಮ ಸಂಬಂಧಿ ರೋಗಗಳು ದೂರಾಗುತ್ತವೆ. ಹಾಗಾಗಿ ಪ್ರತಿ ದಿನ ತಪ್ಪದೆ ಬೆಳಗ್ಗೆ ಎದ್ದ ಕೂಡಲೇ ಜೀರಿಗೆ ನೀರು ಕುಡಿಯುವುದರಿಂದ ನಮಗೆ ಹೆಚ್ಚಿನ ಆರೋಗ್ಯ ಮತ್ತು ಆಯಸ್ಸು ಸಿಗಲಿದೆ.. ಈ ಮಾಹಿತಿಯನ್ನ ತಪ್ಪದೇ ಶೇರ್ ಮಾಡಿ…
Comments