ಬೆಟ್ಟದ ನೆಲ್ಲಿಕಾಯಿ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು..?

09 Aug 2018 3:35 PM | Health
1344 Report

ನೆಲ್ಲಿಕಾಯಿಯಲ್ಲಿ ನಾನಾ ರೀತಿಯ ಬಗೆಗಳಿರುತ್ತವೆ..ನೆಲ್ಲಿಕಾಯಿಯಲ್ಲಿ ಸ್ವಲ್ಪ ಹುಳಿಯ ಅಂಶ ಹೆಚ್ಚಾಗಿರುತ್ತದೆ..ಅದರಲ್ಲಿ ಬೆಟ್ಟದ ನೆಲ್ಲಿಕಾಯಿ ಕೂಡ ಒಂದು ಇದರಿಂದ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.ನೆಲ್ಲಿಕಾಯಿಯ ಎಣ್ಣೆ ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ..

ನೆಲ್ಲಿಕಾಯಿಯ ಎಣ್ಣೆಯನ್ನು ತಲೆಗೆ ನೇರವಾಗಿ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.. ಆದರೆ ಅಷ್ಟೆ ಅಲ್ಲದೆ ನೆಲ್ಲಿಕಾಯಿಯ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಜೊತೆಗೆ ನಮ್ಮ ರಕ್ತವನ್ನು ಶುದ್ದೀಕರಣ ಮಾಡುವಲ್ಲಿ ಯಶಸ್ವಿ ಪಾತ್ರವನ್ನು ವಹಿಸುತ್ತದೆ..ಅಷ್ಟೆ ಅಲ್ಲದೆ ನೆಲ್ಲಿಕಾಯಿಯನ್ನು ಹಸಿಯಾಗಿ ತಿಂದರೂ ಕೂಡ ಕೂದಲನ್ನು ಸದೃಡಗೊಳಿಸುತ್ತದೆ. ಹಾಗಾದ್ರೆ ಬೆಟ್ಟದ ನೆಲ್ಲಿಕಾಯಿ ಎಣ್ಣೆಯನ್ನು ಹೇಗೆ ತಯಾರಿಸುವುದು ಅನ್ನೊದನ್ನ ತಿಳಿದುಕೊಳ್ಳೋಣ.. ಸುಮಾರು ಐದಾರು ಮಧ್ಯಮ ಗಾತ್ರದ ನೆಲ್ಲಿಕಾಯಿಯನ್ನು ತೆಗೆದುಕೊಳ್ಳಿ.. ಅವುಗಳನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಅದಕ್ಕೆ ಸುಮಾರು ಐದಾರು ದಾಸವಾಳದ ಎಲೆಗಳನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ.. ತದ ನಂತರ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಚಿಕ್ಕ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಕುದಿಸಿ. ಸ್ವಲ್ಪ ಕುದಿ ಬಂದ ಮೇಲೆ ಚಿಕ್ಕದಾಗಿ ಹಚ್ಚಿಕೊಂಡ ನೆಲ್ಲಿಕಾಯಿ ಮತ್ತು ದಾಸವಾಳದ ಎಲೆಗಳ ಚೂರನ್ನು ಕುದಿ ಬಂದ ಎಣ್ಣೆಗೆ ಹಾಕಿ ಸುಮಾರು ಇಪ್ಪತ್ತು ನಿಮಿಷ ಕುದಿಯಲು ಬಿಡಿ.. ನಂತರ ಆ ಎಣ್ಣೆಯನ್ನು ತಣ್ಣಗಾಗಲು ಬಿಡಿ.. ಈ ಎಣ್ಣೆಯನ್ನು ಸೊಸಿ ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ನಿತ್ಯವೂ ನಿಮ್ಮ ತಲೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.ಅಷ್ಟೆ ಅಲ್ಲದೆ ಕೂದಲನ್ನು ಸದೃಡಗೊಳಿಸಲು ಒಂದು ಚಮಚ ಮೆಂತ್ಯ ಕಾಳುಗಳನ್ನು ನೀರಿನಲ್ಲಿ ಒಂದು ದಿನ ಪೂರ್ತಿ ನೆನೆಸಿಡಿ.. ಬೆಳಿಗ್ಗೆ ಈ ಕಾಳುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.. ರುಬ್ಬಿಕೊಂಡ ಮಿಶ್ರಣಕ್ಕೆ ಒಂದು ಚಮಚ ನೆಲ್ಲಿಕಾಯಿಯ ಪುಡಿಯನ್ನು ಸೇರಿಸಿ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲು ಸದೃಡಗೊಳ್ಳುತ್ತದೆ...

Edited By

Manjula M

Reported By

Manjula M

Comments