ಮಿಸ್ ಮಾಡ್ದೆ ತಿನ್ನಿ ದಿನಕ್ಕೊಂದು ಪಪ್ಪಾಯ..! ಆರೋಗ್ಯಕ್ಕೆ ಸಿಗಲಿವೆ ಈ ಹತ್ತಾರು ಪ್ರಯೋಜನಗಳು…

ಪಪ್ಪಾಯ ಅಥವಾ ಪರಂಗಿ ಹಣ್ಣು… ಈ ಹಣ್ಣಿನ ಪ್ರಯೋಜನಗಳು ಸಾಕಷ್ಟಿವೆ. ಆಂತರಿಕವಾಗಿ ಮತ್ತು ಬಾಹ್ಯವಾಗಿಯೂ ಕೂಡ ಪಪ್ಪಾಯ ಹಣ್ಣು ಕಾರ್ಯ ನಿರ್ವಹಿಸುತ್ತದೆ. ಈ ಹಣ್ಣಿನಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿವೆ. ಪಾಸ್ಪರಸ್,ತಾಮ್ರ, ಪೊಟ್ಯಾಸಿಯಂ,ಕಬ್ಭಿಣ,ಕ್ಯಾಲ್ಸಿಯಂ,ಮ್ಯಾಂಗನೀಶ್ ಹಾಗೂ ಮೆಗ್ನಿಸಿಯಂಗಳಂತಹ ಖನಿಜಾಂಶಗಳು ಹಾಗೂ ವಿಟಮಿನ್ ಗಳು ಸಮೃದ್ಧವಾಗಿರುತ್ತವೆ.ಹಾಗೂ ಈ ಪಪ್ಪಾಯವು ಜೀರ್ಣಕ್ರಿಯೆಗೆ ಸಾಕಷ್ಟು ಸಹಾಯಕಾರಿಯಾಗಿರುತ್ತದೆ. ಹಾಗಾಗಿ ಪಪ್ಪಾಯ ಹಣ್ಣು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಪಪ್ಪಾಯಿಗಳಲ್ಲಿ ಫೈಬರ್, ವಿಟಮಿನ್ ಎ, ಜೈವಿಕ ಫ್ಲೇವೊನೈಡ್ಸ್ ಮತ್ತು ಆಂಟಿಆಕ್ಸಿಡೆಂಟ್ಗಳಲ್ಲಿ ಹೆಚ್ಚಾಗಿರುತ್ತವೆ. ಹೆಚ್ಚು ಹಣ್ಣಾದ ಪಪ್ಪಾಯಿಯಲ್ಲಿ ಸಕ್ಕರೆ ಅಂಶವನ್ನು ಸುಲಭವಾಗಿ ಹೀರಿಕೊಳ್ಳುವ ಅಂಶ ಇರುತ್ತದೆ ಹಾಗಾಗಿ ದೇಹಕ್ಕೆ ಬೇಕಾದ ಶಕ್ತಿಯನ್ನು ಪಪ್ಪಾಯವು ನೀಡುತ್ತದೆ. ಇದರಲ್ಲಿ ಕ್ಯಾಲೋರಿಯ ಅಂಶವು ಕಡಿಮೆ ಇರುತ್ತದೆ. ಪಪ್ಪಾಯಿಯು ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೊಣ..
ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ
ಪಪ್ಪಾಯ ಹಣ್ಣಿನ ಸೇವನೆಯಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಬಹುದು.ಸಾಕಷ್ಟು ಪ್ರಕರಣಗಳಲ್ಲಿ ಕೆಲವೊಮ್ಮೆ ರಕ್ತ ಹೆಪ್ಪುಗಟ್ಟಿದರೆ ಹೃದಯಾಘಾತ ಅಥವಾ ಪಾರ್ಶ್ವವಾಯುವಾಗುವ ಸಂಭವವಿರುತ್ತದೆ. ಪಪ್ಪಾಯವು ಫೈಬ್ರೈನ್ ಎಂದು ಕರೆಯಲ್ಪಡುವ ಅಂಶವನ್ನು ಒಳಗೊಂಡಿದೆ, ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ಹೃದ್ರೋಗವನ್ನು ತಡೆಗಟ್ಟುವಲ್ಲಿ ಸಹಾಯಕಾರಿ
ಪಪ್ಪಾಯಿಯಲ್ಲಿರುವ ಸಾಕಷ್ಟು ಆರೋಗ್ಯ ಪ್ರಯೋಜನಗಳಲ್ಲಿ ಮುಖ್ಯವಾದದೆಂದರೆ ಹೃದ್ರೋಗವನ್ನು ತಡೆಗಟ್ಟುವುದು... ಪಪ್ಪಾಯಿ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್ ಅಂಶವಿರುವುದರಿಂದ ಹೃದಯರಕ್ತನಾಳದ ಕಾಯಿಲೆ ತಡೆಯಲು ಸಹಕಾರಿಯಾಗುತ್ತದೆ.. ಪಪ್ಪಾಯ ಹಣ್ಣಿನಲ್ಲಿ ಪೊಟ್ಯಾಸಿಯಮ್ ಅಂಶವಿರುವುದರಿಂದ ಹೃದಯದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ. ಪಪ್ಪಾಯಿಗಳನ್ನು ಸ್ಲೈಸ್ ಮಾಡಿಕೊಂಡು ತಿಂದರೆ ಉತ್ತಮ.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
ಪಪ್ಪಾಯಿಯಲ್ಲಿನ ವಿಟಮಿನ್ ಇ ಚರ್ಮಕ್ಕೆ ತುಂಬಾ ಒಳ್ಳೆಯದು ಅಕಾಲಿಕ ಸುಕ್ಕುಗಳು ಬರದಂತೆ ತಡೆಗಟ್ಟುತ್ತದೆ. ವಿಟಮಿನ್ ಎ ನಮ್ಮ ಚರ್ಮಕ್ಕೆ ಕಾಂತಿಯನ್ನು ಒದಗಿಸುತ್ತದೆ. ಅಲ್ಲದೆ, ಪಪ್ಪಾಯವು ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುವ ಅಂಶಗಳನ್ನು ಹೊಂದಿರುತ್ತದೆ ಮತ್ತು ಎಸ್ಜಿಮಾ ಮತ್ತು ಸೋರಿಯಾಸಿಸ್ ಮುಂತಾದ ಚರ್ಮ ಕಾಯಿಲೆಗಳಿಗೆ ಇದು ರೋಗ ನಿರೋಧಕ ಅಂಶವಾಗಿ ಕಾರ್ಯ ನಿರ್ವಹಿಸುತ್ತದೆ. ಹೆಚ್ಚು ಪಪ್ಪಾಯಿ ಸೇವನೆಯಿಂದ ಚರ್ಮವು ಕಾಂತಿಯುಕ್ತವಾಗುತ್ತದೆ.
ಉರಿಯೂತ ವನ್ನು ಶಮನಗೊಳಿಸುತ್ತದೆ
ಪಪ್ಪಾಯದಲ್ಲಿ ಪಾಪೈನ್ ಮತ್ತು ಕಿಮೊಪಪೈನ್ ಎಂದು ಕರೆಯಲಾಗುವ ಕಿಣ್ವಗಳಿವೆ. ಈ ಅಂಶಗಳು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತುಂಬಾ ಉಪಯೋಗಕಾರಿ.. ಪಪ್ಪಾಯದಲ್ಲಿರುವ ಈ ಕಿಣ್ವಗಳು ರುಮಾಟಾಯ್ಡ್ ಆರ್ತ್ರೈಟಿಸ್, ಗೌಟ್, ಎಡಿಮಾ, ಮತ್ತು ಇತರೆ ಉರಿಯೂತಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸವನ್ನು ನಿರ್ವಹಿಸುತ್ತದೆ.
ಪೋಷಕಾಂಶಗಳನ್ನು ಒದಗಿಸುತ್ತದೆ
ಪಪ್ಪಾಯ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಈ ಕಿತ್ತಳೆ ಬಣ್ಣದ ಹಣ್ಣು ಬಿ ಸಂಕೀರ್ಣ ಜೀವಸತ್ವಗಳು ಮತ್ತು ಪೊಟ್ಯಾಸಿಯಮ್, ತಾಮ್ರ ಮತ್ತು ಮೆಗ್ನೀಸಿಯಮ್ಗಳಂತಹ ಖನಿಜಾಂಶಗಳನ್ನು ನಮ್ಮ ದೇಹಕ್ಕೆ ನೀಡುತ್ತದೆ. ಈ ಜೀವಸತ್ವಗಳು ಮತ್ತು ಖನಿಜಗಳು ನಮ್ಮ ದೇಹದಲ್ಲಿನ ಜೀವಕೋಶಗಳ ಪುನರುತ್ಪಾದನೆಗೆ ಸಹಕಾರಿಯಾಗುತ್ತದೆ.
ವಿಟಮಿನ್ ಎ ಪ್ರಮಾಣವನ್ನು ಒದಗಿಸುತ್ತದೆ
ಪಪ್ಪಾಯಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪಪ್ಪಾಯ ಹಣ್ಣಿನಿಂದ ದೃಷ್ಟಿಯ ತೊಂದರೆಗಳು ಕಡಿಮೆಯಾಗುವುದರ ಜೊತೆಗೆ ಕಣ್ಣಿನ ಪೊರೆಗಳು ಮತ್ತು ಮಕ್ಯುಲರ್ ಡಿಜೆನೆರೇಶನ್ಸ್ ನಂತಹ ಕೆಲವು ಕಣ್ಣಿನ ತೊಂದರೆಗಳು ಕಡಿಮೆಯಾಗುತ್ತವೆ. ನಿಮ್ಮ ಕಣ್ಣನ್ನು ಆರೋಗ್ಯದಿಂದ ಕಾಪಾಡಿಕೊಳ್ಳಬೇಕು ಅಂದ್ರೆ ಪಪ್ಪಾಯ ಹಣ್ಣನ್ನು ಹೆಚ್ಚಾಗಿ ತಿನ್ನಬೇಕು.
ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ
ಪಪ್ಪಾಯಿ ಹಣ್ಣಿನಲ್ಲಿ ಯಥೇಚ್ಚವಾಗಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುವುದರಿಂದ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೂ ಸೋಂಕಿನ ಬೆಳವಣಿಗೆಯನ್ನು ಕೂಡ ತಡೆಯುತ್ತದೆ. ಪಪ್ಪಾಯಿಗಳನ್ನು ಸೇವಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ಗಳು, ಶೀತ, ಜ್ವರ ಮತ್ತು ಇತರ ಉಸಿರಾಟದ ಸೋಂಕುಗಳು ನಮ್ಮ ದೇಹದೊಳಗೆ ಬರದಂತೆ ನೋಡಿಕೊಳ್ಳುತ್ತದೆ.
ಇಷ್ಟೆಲ್ಲಾ ಪ್ರಯೋಜನವಿರುವ ಪಪ್ಪಾಯ ಹಣ್ಣನ್ನು ಹೇಗೆ ತಿನ್ನಬೇಕು ಎಂಬುದನ್ನು ಸಾಕಷ್ಟು ಜನರ ಪ್ರಶ್ನೆಯಾಗಿರುತ್ತದೆ.
- ತಾಜಾ ಪಪ್ಪಾಯಿ, ಮಾವು ಮತ್ತು ಅನಾನಸ್ ಹಣ್ಣುಗಳೊಂದಿಗೆ ಸೇರಿಸಿ ಫ್ರೂಟ್ ಸಲಾಡ್ ಮಾಡಿ ತಿನ್ನಬಹುದು
- ಪಪ್ಪಾಯಿ ಹಣ್ಣುಗಳನ್ನು ಜ್ಯೂಸ್ ಮಾಡಿಕೊಂಡು ಸಹ ಕುಡಿಯಬಹುದು
- ಪಪ್ಪಾಯಿ, ಮಾವಿನಕಾಯಿ ಮತ್ತು ಕೆಂಪು ಮೆಣಸುಗಳನ್ನು ಸೇರಿಸಿಕೊಂಡು ತಿನ್ನಬಹುದು.
ಪಪ್ಪಾಯಿ ಹಣ್ಣಿನ ಬಗ್ಗೆ ಇಷ್ಟೆಲ್ಲಾ ಪ್ರಯೋಜನಗಳನ್ನು ತಿಳಿದುಕೊಂಡ ಮೇಲೆ ನೀವು ಕೂಡ ದಿನ ಒಂದೊಂದು ಪಪ್ಪಾಯ ಹಣ್ಣನ್ನು ಸೇವಿಸಿ.. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಕೂಡ ಷೇರ್ ಮಾಡಿ.
Comments