ದಿನಕ್ಕೆ ಎಷ್ಟು ಗಂಟೆ ನಿದ್ದೆ ಮಾಡಬೇಕು ಗೊತ್ತಾ..? ಆರೋಗ್ಯದ ಜೊತೆಗೆ ಆಯಸ್ಸನ್ನು ವೃದ್ಧಿಸುವ ನಿದ್ರೆಯ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ..!

06 Jul 2018 2:02 PM | Health
5238 Report

  ಅಯ್ಯೋ ನಿದ್ರೆ ನಿದ್ರೆ ನಿದ್ರೆ, ಕೂತ್ರು ನಿದ್ರೆ, ನಿಂತ್ರು ನಿದ್ರೆ, ಎಲ್ಲಿದ್ರೂ ನಿದ್ರೆ ಅನ್ನೋದು ಯಾಕೆ..? ಮನುಷ್ಯನಿಗೆ ಉಸಿರಾಡುವುದು, ನೀರು ಕುಡಿಯುವುದು, ಆಹಾರ ತಿನ್ನುವುದು ಎಷ್ಟು ಮುಖ್ಯವೋ ನಿದ್ರೆ ಮಾಡುವುದು ಸಹ ಅಷ್ಟೇ ಮುಖ್ಯ…ಚಿಂತೆ ಇಲ್ಲದವನಿಗೆ ಸಂತೆಲೂ ನಿದ್ದೆ ಎನ್ನುವ ಗಾದೆ ಮಾತಿದೆ. ಆದರೆ ನಮ್ಮ ದೇಹಕ್ಕೆ ನಿದ್ದೆ ಅನ್ನೋದು ಬಹಳ ಮುಖ್ಯ. ಸರಿಯಾದ ವೇಳೆಗೆ ನಿದ್ದೆ ಮಾಡಿದರೆ ನಮ್ಮ ಆರೋಗ್ಯವು ಕೂಡ ಸಮತೋಲನ ಸ್ಥಿತಿಯಲ್ಲಿರುತ್ತದೆ. ಇಲ್ಲವಾದರೆ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ಏನಿಲ್ಲಾ ಅಂದರೂ ಕನಿಷ್ಟ 8 ಗಂಟೆಗಳ ನಿದ್ದೆ ಅವಶ್ಯಕ… ಕೆಲವರು ನಿದ್ದೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವುದಿಲ್ಲ ಕೆಲಸ, ಕೆಲಸ ಅಂತ ನಿದ್ದೆಗೆಡುತ್ತಾರೆ. ನಿದ್ದೆಗೆಡುವುದರಿಂದ ಆರೋಗ್ಯದಲ್ಲಿ ಏರು ಪೇರಾಗುತ್ತದೆ. ಸರಿಯಾದ ವೇಳೆಗೆ ನಿದ್ದೆ ಮಾಡಿದರೆ ನಮ್ಮ ದೇಹವು ಸಕರಾತ್ಮಕವಾಗಿ ಕಾರ್ಯ ನಿರ್ವಹಿಸುತ್ತದೆ.  ವಾಸ್ತವವಾಗಿ 8 ಗಂಟೆಗಳ ನಿದ್ದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಸಾಕಷ್ಟು ಪ್ರಯೋಜನಗಳಿವೆ.

ಎಷ್ಟೆ ಒತ್ತಡ ಇದ್ದರೂ ನಿದ್ದೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ದೇಹಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ದಿನಕ್ಕೆ ಕನಿಷ್ಟ 8 ಗಂಟೆ ನಿದ್ದೆ ಮಾಡುವುದರಿಂದ ಆಗುವ ಪ್ರಯೋಜನಗಳು ಈ ಕೆಳಕಂಡಂತಿವೆ.

ತೂಕವನ್ನು ಹೆಚ್ಚಿಸಲು ನೆರವಾಗುತ್ತದೆ..

ನಿದ್ದೆ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ. ತೂಕವನ್ನು ಹೆಚ್ಚಿಸುವಲ್ಲಿ ನಿದ್ದೆಯ ಪ್ರಭಾವ ಹೆಚ್ಚಾಗಿದೆ ಎಂದು ಹೇಳಬಹುದು. ವಾಸ್ತವವಾಗಿ ಸ್ಥೂಲಕಾಯತೆಗೆ ಸಂಬಂಧ ಪಟ್ಟಂತೆ ತೂಕವನ್ನು ಹೆಚ್ಚಿಸುವಲ್ಲಿ ನಿದ್ರೆಯು ಸಹಕಾರಿಯಾಗುತ್ತದೆ. ತುಂಬಾ ಸಣ್ಣ ಇರುವವರು ಕೂಡ ಸರಿಯಾದ ಸಮಯಕ್ಕೆ ಕನಿಷ್ಟ 8 ಗಂಟೆಗಳ ಕಾಲ ನಿದ್ದೆ ಮಾಡಿದರೆ ನಿಮ್ಮ ತೂಕವನ್ನು ಹೆಚ್ಚಿಸಬಹುದು.

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ..

ದೇಹಕ್ಕೆ ನಿದ್ದೆಯು ತುಂಬಾ ಪ್ರಯೋಜನಕಾರಿಯಾಗುತ್ತದೆ.ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಕೂಡ ನಿದ್ರೆಯ ಪಾತ್ರ ಮಹತ್ವದಾಗಿದೆ. ನಿದ್ರೆ ಮಾಡುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಮೆದುಳು ಚುರುಕಾದಷ್ಟು ನಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಕೆಲವೊಮ್ಮೆ ನಿದ್ದೆ ಮಾಡಿದ ನಂತರ ನಮ್ಮ ಮೆದುಳು ಕೆಲಸ ಮಾಡಲು ಶುರುಮಾಡುತ್ತದೆ. ಹಿಂದಿನ ಘಟನೆಗಳ ಬಗ್ಗೆ ಮೆಲುಕು ಹಾಕುತ್ತಾ ನಮ್ಮ ಬುದ್ದಿಶಕ್ತಿಯನ್ನು ಚುರುಕುಗೊಳಿಸುತ್ತದೆ.

ಆಯಸ್ಸನ್ನು ವೃದ್ಧಿಸುತ್ತದೆ..

ನಿದ್ದೆಯನ್ನು ಹೆಚ್ಚು ಮಾಡಬಾರದು, ಹಾಗಂತ ಕಡಿಮೆನೂ ಮಾಡಬಾರದು, ಮನುಷ್ಯನ ಜೀವಿತಾವಧಿಗೆ ಸಂಬಂಧಿಸಿದಂತೆ ದೇಹಕ್ಕೆ ನಿದ್ದೆ ಎಷ್ಟು ಅವಶ್ಯಕನೋ ಅಷ್ಟು ನಿದ್ದೆ ಮಾಡಬೇಕು. ನಾವು ಎಷ್ಟು ನೆಮ್ಮದಿಯಾಗಿ ಕಣ್ತುಂಬ ನಿದ್ದೆ ಮಾಡುತ್ತೇವೋ ಅಷ್ಟೆ ನಮ್ಮ ಆರೋಗ್ಯದ ಜೊತೆಗೆ ಆಯಸ್ಸು ವೃದ್ಧಿಸುತ್ತದೆ. ಎಷ್ಟೆ ಕೆಲಸವಿದ್ದರೂ ಕೂಡ ನಿದ್ದೆ ಮಾಡುವ ಸಮಯದಲ್ಲಿ ನಿದ್ದೆ ಮಾಡಬೇಕು.

ದೇಹದಲ್ಲಿ ಉಂಟಾಗುವ ಉರಿಯೂತವನ್ನು ಶಮನಗೊಳಿಸುತ್ತದೆ..

ವಯಸ್ಸಾದವರಿಗೆ ಹೃದಯ ಸಮಸ್ಯೆ, ಹೃದಯಾಘಾತ,ಮಧುಮೇಹ, ಸಂಧಿವಾತ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಲುವುದು ಸಹಜ. ಇದರಿಂದಾಗಿ ದೇಹದಲ್ಲಿ ಉರಿಯೂತ ಉಂಟಾಗುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ನಿದ್ರೆ ಮಾಡದಿರುವುದು.ನಿದ್ರೆ ಮಾಡದೆ ಇರುವುದರಿಂದ ದೇಹದಲ್ಲಿ ಪ್ರೋಟೀನ್ ಅಂಶ ಕಡಿಮೆಯಾಗಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದೆ ಕಾರಣಕ್ಕಾಗಿ ಕನಿಷ್ಟ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ನಿದ್ದೆ ಮಾಡುವುದರಿಂದ ದೇಹದಲ್ಲಿ ಕಂಡುಬರುವ ಉರಿಯೂತ ಕಡಿಮೆಯಾಗುತ್ತದೆ.

ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ..

ಒಂದು ವೇಳೇ ನೀವು ಕ್ರೀಡಾಕ್ಷೇತ್ರದಲ್ಲಿದ್ದರೆ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಲು ನಿದ್ದೆ ಸರಳ ಮಾರ್ಗವಾಗಿರುತ್ತದೆ.ನಿದ್ದೆ ಮಾಡುವುದರಿಂದ ಕ್ರೀಡಾಪಟುಗಳಲ್ಲಿ ಸರಾಸರಿ ಸಮಯವನ್ನು ಸುಧಾರಿಸಬಹುದು ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಅಧ್ಯಯನವು ತಿಳಿಸಿದೆ.

ಮಕ್ಕಳಲ್ಲಿನ ಉಸಿರಾಟದ ತೊಂದರೆಯನ್ನು ಹೋಗಲಾಡಿಸಲು ಸಹಾಯಕಾರಿ..

ನಿದ್ರೆ ಮಾಡುವುದರಿಂದ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.ಅದರಲ್ಲು ಮಕ್ಕಳು ನಿದ್ದೆ ಮಾಡುವುದು ತುಂಬಾನೇ ಅವಶ್ಯಕವಾಗಿರುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಉಸಿರಾಟದ ತೊಂದರೆಗೆ ನಿದ್ದೆಯೂ ರಾಮಬಾಣ ಎಂದೆ ಹೇಳಬಹುದು. ಮಕ್ಕಳು ಸಾಮಾನ್ಯವಾಗಿ ನಿದ್ದೆಯನ್ನು ಕಡಿಮೆ ಮಾಡುತ್ತವೆ. ಪೋಷಕರು ಇದರ ಬಗ್ಗೆ ಗಮನ ಹರಿಸಿ ಮಕ್ಕಳನ್ನು ಸರಿಯಾದ ಸಮಯಕ್ಕೆ ಮಲಗಿಸಬೇಕು.

ಅಪಘಾತಗಳನ್ನು ತಪ್ಪಿಸಬಹುದು.. ಅಪಘಾತಕ್ಕೆ ಹಲವು ಕಾರಣಗಳ ಜೊತೆಗೆ ಬಹುಮುಖ್ಯಕಾರಣವೆಂದರೆ ಅದು ನಿದ್ರಾಹೀನತೆ. ಸರಿಯಾಗಿ ನಿದ್ದೆ ಮಾಡದೆ ಇರುವುದು ಕೂಡ ನಿದ್ರೆಹೀನತೆಗೆ ಕಾರಣವಾಗಬಹುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗವಾಗಿ ಹೋಗುವ ಸಮಯದಲ್ಲಿ ಸ್ವಲ್ಪ ನಿದ್ದೆಗೆ ಜಾರಿದರೆ ಸಾಕು ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ನಿದ್ದೆ ಮಾಡಿದರೆ ಇವೆಲ್ಲವನ್ನು ತಪ್ಪಿಸಬಹುದು. ಸರಿಯಾದ ಸಮಯಕ್ಕೆ ನಿದ್ದೆ ಮಾಡಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಂಡ್ರಿ ಅಲ್ವ. ನಿದ್ರೆಯಿಂದ ನಿಮ್ಮ ಆರೋಗ್ಯದ ಜೊತೆಗೆ ಆಯಸ್ಸು ವೃದ್ಧಿಸುವುದರಲ್ಲಿ ನೋಡೌಟ್.. ಈ ವಿಷಯವನ್ನು ನೀವು ತಿಳಿದುಕೊಂಡು ಇತರರಿಗೂ ಶೇರ್ ಮಾಡಿ.

Edited By

Manjula M

Reported By

Manjula M

Comments