ಬೆಳಗಿನ ಬ್ರೇಕ್ಫಾಸ್ಟ್ ಸ್ಕಿಪ್ ಮಾಡ್ತಿದ್ದಿರಾ..? ಹಾಗಾದ್ರೆ ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ..!

ನಮ್ಮ ದಿನನಿತ್ಯದ ಆಹಾರಗಳಲ್ಲಿ ಬೆಳಗಿನ ತಿಂಡಿಯೇ ತುಂಬಾ ಮಹತ್ವದ್ದಾಗಿರುತ್ತದೆ. ಏಕೆಂದರೆ ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹ ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಹಲವು ರೀತಿಯ ಕಾರ್ಯಗಳು ನಡೆದು ದೇಹವು ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಬೆಳಗಿನ ತಿಂಡಿ ಬಿಟ್ಟರೆ ನಾನಾ ರೀತಿಯ ಕಾಯಿಲೆಗಳ ಜೊತೆಗೆ ಸಾವು ಬಂದರೂ ಕೂಡ ಆಶ್ಚರ್ಯ ಪಡಬೇಕಿಲ್ಲ. ಆದ್ದರಿಂದಲೇ ಬೆಳಗಿನ ಸಮಯದಲ್ಲಿ ಏನನ್ನು ಬೇಕಾದರು ಬಿಡಿ ಆದರೆ ತಿಂಡಿ ತಿನ್ನುವುದನ್ನು ಬಿಟ್ಟರೆ ನಮ್ಮ ದೇಹ ಕಾಯಿಲೆಗಳ ಗೂಡಾಗುವುದು ಖಂಡಿತ. ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ಆಗುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.
ಹೌದು..ಇಂದಿನ ದಿನಗಳಲ್ಲಿ ಬೆಳಿಗ್ಗೆ ಬೇಗನೇ ಕೆಲಸಗಳಿಗೆ ಹೋಗುವ ಅವಸರ ಎಲ್ಲರಿಗೂ ಇದ್ದೆ ಇರುತ್ತದೆ. ಕೆಲವೊಮ್ಮೆ ತಿಂಡಿ ಸಿದ್ದಗೊಳಿಸಲು ಕೂಡ ಕಾಲವಕಾಶ ಇರುವುದಿಲ್ಲ. ಹಾಗಾಗಿ ತಿಂಡಿ ತಿನ್ನದೆ ಎಷ್ಟೋ ಜನ ಹಾಗೆ ಇದ್ದು ಬಿಡುತ್ತಾರೆ. ಬೆಳಗಿನ ಸಮಯದಲ್ಲಿ ತಿಂಡಿಯನ್ನು ಬಿಟ್ಟರೆ ಅಪಾಯಕಾರಿ ರೋಗಗಳು ಬರಬಹುದು. ನಂತರ ಸಾವು ಕೂಡ ಸಮೀಪಿಸಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಬೆಳಗಿನ ಉಪಹಾರವನ್ನು ಬಿಡುವವರು ಬೊಜ್ಜಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಮಧುಮೇಹ ಬರುವ ಸಾಧ್ಯತೆ ಇರುತ್ತದೆ
ನಾವು ತಿನ್ನುವ ತಿಂಡಿಗೂ ಮತ್ತು ದೇಹಕ್ಕೂ ಕೂಡ ಅವಿನಾಭಾವ ಸಂಬಂಧ ಇರುತ್ತದೆ. ನಮ್ಮ ಆರೋಗ್ಯವನ್ನು ಬಲಪಡಿಸುವಲ್ಲಿ ಬೆಳಗಿನ ಉಪಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ಮಧುಮೇಹ ಹೆಚ್ಚಾಗುತ್ತದೆ.ಅಷ್ಟೆ ಅಲ್ಲದೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಬೆಳಗಿನ ಉಪಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ತೂಕ ಹೆಚ್ಚಿಸಲು ಕಾರಣವಾಗುತ್ತದೆ
ಬೆಳಗಿನ ತಿಂಡಿಯನ್ನು ಬಿಟ್ಟರೆ ಸಾಮಾನ್ಯವಾಗಿ ತೂಕ ಕಡಿಮೆಯಾಗುತ್ತೇವೆ ಎಂದುಕೊಂಡಿರುತ್ತಾರೆ. ಆದರೆ ಅದು ತಪ್ಪು. ತಿಂಡಿಯನ್ನು ಬಿಟ್ಟರೆ ತೂಕ ಹೆಚ್ಚಾಗುತ್ತದೆ. ಹೌದು.. ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ಕೊಬ್ಬಿನ ಅಂಶವು ಹೆಚ್ಚಾಗುತ್ತದೆ. ಹಸಿವು ಹೆಚ್ಚಾದಷ್ಟು ನಾವು ಮಾಡುವ ಊಟದ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ.
ಶಕ್ತಿಯ ಮಟ್ಟವನ್ನು ಕುಗ್ಗಿಸುತ್ತದೆ
ನಾವು ಸೇವಿಸುವ ಆಹಾರ ನಮ್ಮನ್ನ ದಿನವಿಡಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.ಹಾಗೆಯೆ ನಮ್ಮ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ. ಬೆಳಗಿನ ತಿಂಡಿಯನ್ನು ಬಿಟ್ಟರೆ ನಮ್ಮ ಮನಸ್ಥಿತಿ ಮೇಲೂ ಕೂಡ ಪರಿಣಾಮವನ್ನು ಬೀರಬಹುದು. ಆ ದಿನವೆಲ್ಲಾ ಮಂಕಾಗಿ ಕೆಲಸಮಾಡಲು ಶಕ್ತಿ ಇಲ್ಲದೆ ಉತ್ಸಾಹವೂ ಇಲ್ಲದೆ ಇರಬೇಕಾಗುತ್ತದೆ.
ಹೃದಯ ಸಮಸ್ಯೆ ಬರಬಹುದು
ಬೆಳಗಿನ ಉಪಹಾರವನ್ನು ಬಿಡುವುದರಿಂದ ಹೃದಯದ ಸಮಸ್ಯೆ ಉಂಟಾಗಬಹುದು. ಹೃದಯಾಘಾತ ಆಗುವ ಸಂಭವ ಹೆಚ್ಚಿರುತ್ತದೆ.ಸರಿಯಾದ ಸಮಯಕ್ಕೆ ತಿಂಡಿಯನ್ನು ತಿನ್ನದಿದ್ದರೆ ರಕ್ತದೊತ್ತಡ ಸಮಸ್ಯೆ, ರಕ್ತನಾಳಗಳ ಸಮಸ್ಯೆ ಹೆಚ್ಚಾಗಿ ಸ್ಟ್ರೋಕ್ ಆಗುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಬೆಳಗಿನ ಉಪಹಾರವನ್ನು ತ್ಯಜಿಸಬೇಡಿ
ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ
ಹೌದು.. ಉಪಹಾರವನ್ನು ಬಿಡುವುದರಿಂದ ಅನಾರೋಗ್ಯಕರ ಜೀವನಕ್ಕೆ ನಾವೇ ಎಡೆಮಾಡಿಕೊಟ್ಟಂತಾಗುತ್ತದೆ. ಸಂಶೋಧನೆಯ ಪ್ರಕಾರ ಊಟ ಬಿಡುವುದರಿಂದ ತೂಕದ ಪ್ರಮಾಣ ಹೆಚ್ಚಾಗುತ್ತದೆ. ಜೊತೆಗೆ ಬೊಜ್ಜು ಕೂಡ ಹೆಚ್ಚಾಗುತ್ತದೆ ಜೊಜ್ಜು ಹೆಚ್ಚಾದರೆ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.
ಮೈಗ್ರೇನ್ ಬರಲು ಕಾರಣವಾಗುತ್ತದೆ
ರಾತ್ರಿಯೆಲ್ಲಾ ನಿದ್ದೆ ಮಾಡುವುದರಿಂದ ನಮ್ಮ ದೇಹದಲ್ಲಿ ಗ್ಲೂಕೋಸ್ ಮಟ್ಟವು ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ. ಹೈಪೋಗ್ಲೈಸೆಮಿಯ ಎಂಬ ಅಂಶವು ಕೂಡ ಕಡಿಮೆಯಾಗುತ್ತದೆ.ಅಷ್ಟೆ ಅಲ್ಲದೆ ಹಾರ್ಮೋನ್ ಗಳ ಬದಲಾವಣೆಯೂ ಆಗುತ್ತದೆ. ಆ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗಿ ಮೈಗ್ರೆನ್ ಬರುವ ಸಾಧ್ಯತೆಗಳು ಇರುತ್ತವೆ.
ಕೂದಲು ಉದುರುವ ಸಾಧ್ಯತೆ ಇರುತ್ತದೆ
ಪೌಷ್ಟಿಕಾಂಶ ಆಹಾರ ನಮ್ಮ ದೇಹದಲ್ಲಿ ವಿಭಿನ್ನ ರೀತಿಯ ಪರಿಣಾಮವನ್ನು ಬೀರುತ್ತದೆ. ಬೆಳಗಿನ ಸಮಯದಲ್ಲಿ ಉಪಹಾರವನ್ನು ತ್ಯಜಿಸುವುದರಿಂದ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಕೂದಲಿಗೆ ಬೇಕಾದ ಪ್ರೋಟಿನ್ ಗಳು ಸಿಗದೆ ಇದ್ದಾಗ ಕೂದಲಿನ ಸಮಸ್ಯೆ ಎದುರಾಗುವುದು ಸಾಮಾನ್ಯ.
ನಾವು ಸೇವಿಸುವ ದಿನನಿತ್ಯದ ಬೆಳಗಿನ ಉಪಹಾರವನ್ನು ತ್ಯಜಿಸಿದರೆ ದೇಹಕ್ಕೆ ಆಗುವ ತೊಂದರೆಗಳ ಬಗ್ಗೆ ತಿಳಿದುಕೊಂಡ್ರಿ ಅಲ್ವ. ಹಾಗಾಗಿ ಎಷ್ಟೆ ಕೆಲಸ ಇದ್ದರೂ ಕೂಡ ಸ್ವಲ್ಪ ಬಿಡುವು ಮಾಡಿಕೊಂಡು ತಿಂಡಿ ತಿನ್ನಿ ಇಲ್ಲ ಅಂದರೆ ಈ ರೀತಿಯ ಸಮಸ್ಯೆಗಳು ಎದುರಾಗಿ ಆರೋಗ್ಯ ಹದಗೆಡುತ್ತದೆ..ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ. ಈ ವಿಷಯವನ್ನು ನೀವು ತಿಳಿದುಕೊಂಡು ಇತರರಿಗೂ ಕ
Comments