ಕಿಡ್ನಿ ಸಮಸ್ಯೆಗಳಿಗೆ ರಾಮಬಾಣದಂತಿರುವ ಈ ಮನೆಮದ್ದುಗಳು..!
ಈಗಿನ ಜನರೇಷನ್ ನಲ್ಲಿ ನಮ್ಮ ದೇಹದ ಬಗ್ಗೆ ಕಾಳಜಿ ವಹಿಸಲು ಸಮಯವೇ ಇಲ್ಲದಂತಾಗಿದೆ. ದೇಹದ ಹೊರ ಭಾಗದಲ್ಲಿ ಏನಾದರೂ ಸಮಸ್ಯೆ ಆದರೆ ನೋಡಿಕೊಳ್ಳಲು ಕೂಡ ಟೈಮ್ ಇರುವುದಿಲ್ಲ. ಅಂತಹುದರಲ್ಲಿ ದೇಹದ ಒಳಗಿನ ಅಂಗಾಂಗಗಳ ಪೋಷಣೆ ಮಾಡಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನೂ ಕೂಡ ಕಾಡುವುದು ಕಾಮನ್.
ದೇಹದ ಪ್ರಮುಖ ಅಂಗವೆಂದರೆ ಅದು ಕಿಡ್ನಿ. ಕಿಡ್ನಿಯಲ್ಲಿ ಯಾವಾಗಲೂ ಸಮಸ್ಯೆಗಳು ಬರುವುದು ಕಾಮನ್.. ಆದರೆ ಕಿಡ್ನಿಯಲ್ಲಿ ಸಮಸ್ಯೆ ಉಂಟಾದರೆ ಏನು ಮಾಡಬೇಕು ಎಂಬ ಮಾಹಿತಿ ಕೆಲವರಿಗೆ ತಿಳಿದಿರುವುದಿಲ್ಲ. ಅದಕ್ಕೆ ಒಂದಿಷ್ಟು ಮನೆ ಮದ್ದುಗಳನ್ನು ತಿಳಿದುಕೊಳ್ಳಿ.
ಬೆಳ್ಳುಳ್ಳಿ ಸೇವನೆ
ಬೆಳ್ಳುಳ್ಳಿಯಲ್ಲಿ ಹೆಚ್ಚಾಗಿ ಆ್ಯಂಟಿಆಕ್ಸಿಡೆಂಟ್ ವಿರೋಧಿ ಗುಣಗಳಿರುತ್ತವೆ. ಇದು ಕಿಡ್ನಿಯಲ್ಲಿ ಕಂಡುಬರುವ ಕಾಯಿಲೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಕಿಡ್ನಿಯನ್ನು ರಕ್ಷಿಸುವಲ್ಲಿ ಬೆಳ್ಳುಳ್ಳಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ತಾಜಾ, ಬೇಯಿಸಿದ ಅಥವಾ ಬೆಳ್ಳುಳ್ಳಿ ಹುಡಿಯನ್ನು ನಿಮ್ಮ ಆಹಾರದಲ್ಲಿ ಬಳಸಿ ಕಿಡ್ನಿ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ
ಆಲಿವ್ ತೈಲ ಬಳಸಿ
ಆಲಿವ್ ಆಯಿಲ್ ನಲ್ಲಿರುವಂತಹ ಉರಿಯೂತ ಶಮನಕಾರಿ ಮತ್ತು ಕೊಬ್ಬಿನಾಮ್ಲವು ಆಕ್ಸಿಡೇಷನ್ ಕಡಿಮೆ ಮಾಡಿ ಕಿಡ್ನಿ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಹೂಕೋಸು ಬಳಸಿ
ಕಿಡ್ನಿಯ ಪೋಷಣೆಯಲ್ಲಿ ಹೂಕೋಸು ಪ್ರಮುಖವಾಗಿರುತ್ತದೆ. ಹೂ ಕೋಸಿನಲ್ಲಿ ಇರುವಂತಹ ಪೈಥೋಕೆಮಿಕಲ್ ಅಂಶವು ಕಿಡ್ನಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಹೂಕೋಸಿನಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ವಿಟಮಿನ್ ಕೆ, ನಾರಿನಾಂಶ ಮತ್ತು ಫಾಲಿಕ್ ಎಂಬ ಆಮ್ಲವಿರುತ್ತದೆ.
ಸೇಬಿನ ಹಣ್ಣಿನ ಸೇವನೆ
ಸೇಬಿನ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಅನುಕೂಲಗಳೇ ಜಾಸ್ತಿ .ಸೇಬಿನ ಹಣ್ಣಿನಿಂದಲೂ ಕೂಡ ಆರೋಗ್ಯಕರ ಕಿಡ್ನಿಯನ್ನು ಪಡೆಯಬಹುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಯತೇಚ್ಚವಾಗಿರುತ್ತವೆ.
ಲಿಂಬೆರಸ
ಲಿಂಬೆರಸದಲ್ಲಿ ಇರುವಂತಹ ಆಮ್ಲೀಯ ಗುಣವು ಕಿಡ್ನಿಯಲ್ಲಿರುವ ಕಲ್ಲುಗಳನ್ನು ಕರಗಿಸಲು ನೆರವಾಗತ್ತದೆ. ಇದರಿಂದ ಕಿಡ್ನಿಯು ಆರೋಗ್ಯ ಚೆನ್ನಾಗಿರುತ್ತದೆ. ಲಿಂಬೆರಸದಲ್ಲಿ ಇರುವಂತಹ ಸಿಟ್ರಸ್ ಕಿಡ್ನಿಯಲ್ಲಿರುವಂತಹ ಕಲ್ಲುಗಳು ಒಂದಕ್ಕೊಂದು ಜೋಡಿಸಿಕೊಳ್ಳದಂತೆ ನೋಡಿಕೊಳ್ಳಲು ನೆರವಾಗುತ್ತದೆ.
ಕಿಡ್ನಿ ಸಮಸ್ಯೆ ಇರುವವರು ಈ ಮೇಲಿನ ಮದ್ದುಗಳನ್ನು ಬಳಸಿ ಸಮಸ್ಯೆಯಿಂದ ದೂರವಿರಿ. ಒಂದು ವೇಳೆ ಸಮಸ್ಯೆ ಹೆಚ್ಚಾದರೆ ವೈದ್ಯರ ಬಳಿ ಹೋಗುವುದನ್ನು ಮರೆಯದಿರಿ.
Comments