ಡ್ಯಾಂಡ್ರಫ್ ಸಮಸ್ಯೆ ಕಾಡುತ್ತಿದ್ಯಾ? ಹಾಗಾದ್ರೆ ಇಲ್ಲಿವೆ ಸಿಂಪಲ್ ಟಿಪ್ಸ್..
ದೇಹ ಎಂದ ಮೇಲೆ ಅನೇಕ ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಪ್ರತಿಯೊಬ್ಬರು ಕೂಡ ಏನಾದರೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಅದರಲ್ಲೂ ಹೆಚ್ಚಾಗಿ ತಲೆಹೊಟ್ಟಿನ ಸಮಸ್ಯೆಯು ಒಂದಲ್ಲ ಒಂದು ಹಂತದಲ್ಲಿ ಎಲ್ಲರಲ್ಲೂ ಕಾಡುತ್ತಿರುತ್ತದೆ. ತಲೆಹೊಟ್ಟು ಬರಲು ಸಾಮಾನ್ಯವಾದ ಕಾರಣಗಳೇನು ಅದಕ್ಕೆ ಇರುವ ಪರಿಹಾರಗಳೇನು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.
ತಲೆಹೊಟ್ಟಿನಿಂದಾಗಿ ಮೊಡವೆಗಳು, ಒಣಚರ್ಮ ಮತ್ತು ಬೊಕ್ಕೆಗಳು ಕಾಣಿಸಿಕೊಳ್ಳಬಹುದು. Malassezia globosa ಎಂಬ ಹೆಸರಿನ ಶಿಲೀಂಧ್ರ ತಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬಂದರೆ ಅದು ತಲೆಹೊಟ್ಟು ಬರುವುದಕ್ಕೆ ಕಾರಣವಾಗುತ್ತದೆ. ಒಣ ಚರ್ಮವು ಹೆಚ್ಚಾದಷ್ಟು ಡ್ಯಾಂಡ್ರಫ್ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ನೈಸರ್ಗಿಕವಾಗಿ ಸಾಯುವಂತಹ ಹೊರಚರ್ಮದ ಜೀವಕೋಶಗಳು, ಹೊರಚರ್ಮಕ್ಕೆ ಅಂಟಿಕೊಂಡಿರುವುದೇ ತಲೆಹೊಟ್ಟಿಗೆ ಕಾರಣವಾಗಬಹುದು. ಚರ್ಮತಜ್ಞರ ಪ್ರಕಾರ ಒತ್ತಡದಲ್ಲಿರುವ ಮನಸ್ಸು ಕೂಡ ತಲೆಹೊಟ್ಟು ಹೆಚ್ಚಿಸಲು ಕಾರಣವಾಗುತ್ತದೆ.ಅದೇ ರೀತಿಯಾಗಿ ಸರಿಯಾಗಿ ಸ್ನಾನ ಮಾಡದೇ ಇರುವುದು, ತಲೆಯಲ್ಲಿ ಹಾಗೆ ಧೂಳು ಬಿಡುವುದು ಕೂಡ ತಲೆಹೊಟ್ಟಿಗೆ ಕಾರಣವಾಗಬಹುದು. ಕೂದಲಿನ ಪೋಷಣೆಯನ್ನು ಸರಿಯಾಗಿ ಮಾಡದೆ ಇದ್ದಲ್ಲಿ ಕೂಡ ತಲೆಹೊಟ್ಟು ಬರಬಹುದು. ಕೂದಲಿನ ಆರೈಕೆ ತುಂಬಾ ಮುಖ್ಯ. ಒಬ್ಬರು ಬಳಸಿದ ಬಾಚಣಿಕೆಯನ್ನು ಬಳಸಿದರೂ ಕೂಡ ತಲೆಹೊಟ್ಟು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ನಿಂಬೆ ರಸವನ್ನು ಬಳಸಿ
ನಿಂಬೆರಸವನ್ನು ಬಳಸುವುದರಿಂದ ಕೂದಲಿನಲ್ಲಿರುವ ತಲೆಹೊಟ್ಟು ಕಡಿಮೆಯಾಗುತ್ತದೆ. ಡ್ಯಾಂಡ್ರಫ್ ತೊಡೆದುಹಾಕಲು ನಿಂಬೆರಸ ಸೂಕ್ತ ಎನ್ನಬಹುದು. ನಿಂಬೆರಸವನ್ನು ಕೂದಲಿನ ಬುಡದಿಂದ ಕೂದಲಿಗೆ ಹಚ್ಚಿ ಸುಮಾರು 20 ರಿಂದ 25 ನಿಮಿಷಗಳ ಕಾಲ ಹಾಗೇಯೆ ಬಿಡಿ. ನಂತರ ನಿಮ್ಮ ಕೂದಲನ್ನು ಶಾಂಪೂವಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
ಆಲಿವ್ ಎಣ್ಣೆಯನ್ನು ಬಳಸಿ
ಆಲಿವ್ ಎಣ್ಣೆಯು ಕೂಡ ತಲೆಹೊಟ್ಟು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ತಲೆ ಸ್ನಾನ ಮಾಡುವ ಮೊದಲು ಅಂದರೆ ಸುಮಾರು ಐದರಿಂದ ಹತ್ತು ನಿಮಿಷಗಳ ಮೊದಲೆ ಆಲಿವ್ ಎಣ್ಣೆಯನ್ನು ತಲೆಯ ಕೂದಲಿಗೆ ಅಫ್ಲೈ ಮಾಡಿ. ತದ ನಂತರ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಮೊಟ್ಟೆಯ ಹಳದಿ ಭಾಗವನ್ನು ಬಳಸಿ
ಮೊಟ್ಟೆಯ ಒಳಗೆ ಇರುವ ಹಳದಿ ಬಣ್ಣದ ಲೋಳೆ ಕೂಡ ತಲೆಹೊಟ್ಟು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ಅಥವಾ ಎರಡು ಮೊಟ್ಟೆಗಳನ್ನು ತೆಗೆದುಕೊಂಡು ಅದರ ಲೋಳೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಆಮಿಶ್ರಣವನ್ನು ತಲೆಗೆ ಹಚ್ಚಿ. ಹಚ್ಚಿದ ನಂತರ ತಲೆಗೆ ಒಂದು ಪ್ಲಾಸ್ಟಿಕ್ ಟೋಪಿಯನ್ನು ಹಾಕಿಕೊಳ್ಳುವುದು ಉತ್ತಮ. ಆ ಮಿಶ್ರಣವನ್ನು ತಲೆಯಲ್ಲಿ ಒಂದು ಗಂಟೆಗಳ ಕಾಲ ಬಿಡಿ. ನಂತರ ಶಾಂಪುವಿನಿಂದ ಚೆನ್ನಾಗಿ ತೊಳೆಯಿರಿ
ಮೆಂತ್ಯ ಬೀಜಗಳ ಬಳಸಿ
ಮೆಂತ್ಯವು ಕೂಡ ತಲೆಹೊಟ್ಟು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಮೊದಲು ಮೆಂತ್ಯ ಬೀಜಗಳನ್ನು ಒಂದು ರಾತ್ರಿಯಿಡಿ ನೆನಸಿ. ನಂತರ ನೆನಸಿದ ಮೆಂತ್ಯವನ್ನು ರುಬ್ಬಿಕೊಳ್ಳಿ. ಆ ರುಬ್ಬಿಕೊಂಡ ಮಿಶ್ರಣವನ್ನು ನಿಮ್ಮ ತಲೆಯ ಬುಡದಿಂದ ಕೂದಲಿಗೆ ಹಚ್ಚಿ ಒಂದು ಗಂಟೆಗಳ ಕಾಲ ಹಾಗೆಯೆ ಬಿಟ್ಟು ಸ್ನಾನ ಮಾಡಿ. ಮೆಂತ್ಯ ಕೂದಲು ಉದರುವುದನ್ನು ಕೂಡ ತಡೆಗಟ್ಟುತ್ತದೆ.
ಬೇಬಿ ಆಯಿಲ್ ಬಳಸಿ
ಬೇಬಿ ಆಯಿಲ್ ಕೂಡ ತಲೆಹೊಟ್ಟು ಹೋಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನೆತ್ತಿಯಿಂದ ಕೂದಲಿನ ತುದಿಯವರೆಗೂ ಬೇಬಿ ಆಯಿಲ್ ನೀಮದ ಕೂದಲನ್ನು ಮಸಾಜ್ ಮಾಡಬೆಕು. ಹೀಗೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಮಸಾಜ್ ಮಾಡಿದ ನಂತರ ಪ್ಲಾಸ್ಟಿಕ್ ಕ್ಯಾಪ್ ನಿಂದ ತಲೆಕೂದಲನ್ನು ಕವರ್ ಮಾಡಿಕೊಳ್ಳಿ. ಅರ್ಧ ಅಥವಾ ಒಂದು ಗಂಟೆ ಬಿಟ್ಟು ತಲೆ ಸ್ನಾನ ಮಾಡಿದರೆ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ಅಡಿಗೆ ಸೋಡಾವನ್ನು ಬಳಸಿ
ಅಡಿಗೆ ಸೋಡಾ ಕೇವಲ ಅಡಿಗೆ ಮಾಡುವುದಕ್ಕೆ ಅಷ್ಟೆ ಅಲ್ಲ. ತಲೆ ಹೊಟ್ಟು ನಿವಾರಣೆ ಮಾಡಲು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಕೂದಲನ್ನು ಸ್ವಲ್ಪ ತೇವ ಮಾಡಿ ನಂತರ ಅಡಿಗೆ ಸೋಡಾವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಿ ನಂತರ ಕೂದಲನ್ನು ಚೆನ್ನಾಗಿ ತೊಳೆದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುತ್ತಲೇ ಇರುತ್ತದೆ. ಹೊರಗಡೆ ಹೋಗಿ ದುಬಾರಿ ಶಾಂಪುಗಳನ್ನು ತಂದು ಹಚ್ಚಿಕೊಳ್ಳುವ ಬದಲು ಮನೆಯಲ್ಲಿರುವ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಕೂದಲಿನ ಆರೈಕಕೆಯನ್ನು ಮಾಡಿಕೊಳ್ಳಿ.
Comments