ಆಲ್ ಇನ್ ಒನ್ ಈ ‘ಆಲೋವೆರಾ’ದ ಪ್ರಯೋಜನಗಳು ಅಷ್ಟಿಷ್ಟಲ್ಲ..!
ಭಾರತೀಯ ವೈದ್ಯ ಪದ್ದತಿಯಲ್ಲಿ ಆಯುರ್ವೇದದಲ್ಲಿ ನಮ್ಮ ಸುತ್ತಲಿನ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ರೋಗ ನಿವಾರಣೆ ಮಾಡಿಕೊಳ್ಳಬಹುದು. ಮನೆಯಲ್ಲೇ ಔಷಧಿ ಸಸ್ಯಗಳನ್ನು ಬೆಳೆಸಿ ಚಿಕಿತ್ಸಾ ಉಪಯೋಗವನ್ನು ಪಡೆದುಕೊಳ್ಳಬಹುದು. ಅಂತಹ ಗಿಡಮೂಲಿಕೆಗಳಲ್ಲಿ ಲೋಳೆಸರವೂ ಕೂಡ ಪ್ರಮುಖವಾದ ದಿವ್ಯ ಔಷಧಿಯ ಸಸ್ಯ. ಇದರ ಮೂಲಸ್ಥಾನ ಉತ್ತರ ಆಫ್ರಿಕಾ. ಈ ಸಸ್ಯವನ್ನ ಕ್ರಿ.ಶ ಒಂದನೆಯ ಶತಮಾನದಿಂದಲೂ ಗಿಡಮೂಲಿಕೆಯ ಸಸ್ಯವೆಂದು ಗುರುತಿಲಾಗಿದೆ.
ಇದರಲ್ಲಿ ಬೇಕಾದಷ್ಟು ಪೋಷಕಾಂಶ ಮತ್ತು ಖನಿಜಾಂಶಗಳು ಹೇರಳವಾಗಿದೆ. ಕ್ಯಾಲ್ಸೀಯಂ, ಪೊಟ್ಯಾಶಿಯಂ, ಮೆಗ್ನೀಶಿಯಂ, ಜೀವಸತ್ವಗಳು ಇರುವುದರಿಂದ ಲೋಳೆಸರವನ್ನು ಬಹಳ ಹಿಂದಿನಿಂದಲೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಪ್ರತಿಯೊಂದು ಔಷಧಿಯಲ್ಲಿ ಲೋಳೆಸರದ ಪಾಲು ಇದ್ದೇ ಇರುತ್ತದೆ. ಆಯುರ್ವೇದಲ್ಲಿ ನಮಗೆ ಸಿಕ್ಕುವಂತಹ ಕೆಲವು ಔಷಧಿಗಳಲ್ಲಿ ಅಲೋವೆರಾದಿಂದಾನೆ ಮಾಡಿರುವುದ್ದಾಗಿರುತ್ತದೆ ಆದ್ದರಿಂದ ಇದಕ್ಕೆ ಪ್ರಮುಖ ಸ್ಥಾನ ದೊರೆತಿದೆ..
ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ
ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಅಲೋ ವೆರಾ ರಸವನ್ನು ಕುಡಿಯುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಕರುಳಿನ ಒಳಪದರವನ್ನು ಸರಿಪಡಿಸಲು ಆಲೋವೆರಾ ಸಹಾಯ ಮಾಡುತ್ತದೆ. ಮನುಷ್ಯನ ಕರುಳಿನ ಒಳಪದರವು ಹಾನಿಗೊಳಗಾದಾಗ ರಕ್ತದೊತ್ತಡ ಹೆಚ್ಚಾಗಬಹುದು.. ಆಲೋವೆರದ ರಸವನ್ನು ಕುಡಿದರೆ ಕರುಳಿಗೆ ಬೇಕಾದ ನೀರಿನ ಅಂಶವನ್ನು ಹೆಚ್ಚಿಸುತ್ತದೆ, ಅಲೋವೆರಾವು ದೇಹಕ್ಕೆ ಹಾನಿಕಾರಕ ಜೀವಾಣುಗಳು ಬರದಂತೆ ನೋಡಿಕೊಳ್ಳುತ್ತದೆ.
ಮಕ್ಕಳಿಗೆ ಬರುವ ಯಕೃತ್ ಸಮಸ್ಯೆಗೆ ಇದು ಹೇಳಿ ಮಾಡಿಸಿದಂತ ಔಷದಿ
ಲೋಳೆಸರಕ್ಕೆ ಶುದ್ಧ ಅರಿಶಿನ ಮಿಶ್ರಣ ಮಾಡಿ ಅದನ್ನು ಮೂರು ದಿನಗಳ ಕಾಲ ಬೆಳಿಗ್ಗೆ ರಾತ್ರಿ ಸೇವನೆ ಮಾಡಿದರೆ ಯಕೃತ್ ಸಮಸ್ಯೆ ಪರಿಹಾರವಾಗುತ್ತದೆ.
ಸುಟ್ಟ ಗಾಯಗಳಿಗೆ ದಿವ್ಯೌಷಧ
ಲೋಳೆರಸದಲ್ಲಿ ಸಿಗುವ ಅಂಟು ರೀತಿಯ ತಿರುಳಿಗೆ ಬೆಣ್ಣೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಹರೆದು ದೇಹದ ಯಾವುದೇ ಸುಟ್ಟ ಗಾಯದ ಭಾಗಗಳಿಗೆ ಹಚ್ಚಿದರೆ ಗಾಯದ ನೋವು ಕಡಿಮೆಯಾಗಿ ಬೊಬ್ಬೆಗಳು ಬರುವುದಿಲ್ಲ. ಮತ್ತೆ ಸುಟ್ಟ ಗಾಯದ ಕಲೆ ಅಥವಾ ಮಚ್ಚೆಗಳು ಉಳಿಯದಂತೆ ಕಾಪಾಡುತ್ತದೆ.
ಕೆಮ್ಮಿಗೆ ರಾಮಬಾಣ ಈ ಆಲೋವೆರಾ
ಲೋಳೆಸರವನ್ನು ಬಿಸಿ ಮಾಡಿ ಆ ರಸಕ್ಕೆ ಎರಡಯ ಹನಿ ಜೇನು ತುಪ್ಪ ಬೆರಸಿ ತೀವ್ರ ಕೆಮ್ಮಿನಿಂದ ಬಳಲುತ್ತಿರುವವರಿಗೆ ಕುಡಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ತಿರುಳನ್ನು ನಿತ್ಯ ಸೇವಿಸಿದರೆ ಜಠರದ ಹುಣ್ಣು ಮತ್ತು ಮೂಲವ್ಯಾದಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಾಮಬಾಣದಂತೆ ಪರಿಣಮಿಸಿ ಶೀಘ್ರದಲ್ಲೆ ಗುಣವಾಗುವಂತೆ ಮಾಡುತ್ತದೆ.
ಸಂಧಿವಾತದ ಸಮಸ್ಯೆಯನ್ನು ನಿವಾರಿಸುತ್ತದೆ
ಇನ್ನೂ ಮೂಳೆಗಳಲ್ಲಿರುವ ಸೈವೋನಿಯರ್ ಅಂಶ ಒಣಗಿದಾಗಲೇ ಕೀಲುಗಳಲ್ಲಿ ನೋವುಂಟಾಗಿ ಸಂಧಿವಾತಕ್ಕೆ ಕಾರಣವಾಗುತ್ತದೆ. ಲೋಳೆಸರವನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಂಡರೆ ಲೋಳೆಸರದಲ್ಲಿನ ಫಂಗಸ್ ವಿರೋಧಿ ಅಂಶ ಮತ್ತು ಉರಿ ನಿವಾರಕ ಅಂಶ ಮೂಳೆಗಳು ಒಂದಕ್ಕೊಂದು ತಾಗಿ ಸವೆಯುವುದನ್ನು ತಪ್ಪಿಸುತ್ತದೆ.
ರಕ್ತದೋತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ
ಲೋಳೆಸರ ಹೊಟ್ಟೆಯಲ್ಲಿ ಮತ್ತು ರಕ್ತದಲ್ಲಿ ಆಸಿಡ್ ಅಂಶವನ್ನು ಕಡಿಮೆ ಮಾಡಿ ಅಲ್ಸರ್ ಸಾಧ್ಯತೆಯನ್ನು ತಳ್ಳಿಹಾಕಿ ಪರೋಕ್ಷವಾಗಿ ರಕ್ತದೋತ್ತಡ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.. ಮತ್ತು ರಕ್ತನಾಳಗಳನ್ನೂ ಸದೃಡಗೊಳಿಸುತ್ತದೆ.
ಇದರ ಹೊರತಾಗಿ ಲೋಳೆಸರದಲ್ಲಿ ಇನ್ನೂ ಹಲವು ಪ್ರಯೋಜನವಿದ್ದು ನಿರಂತರವಾಗಿ ಲೋಳೆಸರ ಸೇವನೆ ಮಾಡುತ್ತಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾಯಿಲೆಗಳು ಹತ್ತಿರ ಸುಳಿಯದೇ ಆರೋಗ್ಯವಾಗಿ ಇಡುತ್ತದೆ. ನಿಮ್ಮ ಮನೆಯ ಮುಂದೆ ಒಂದು ಚಿಕ್ಕ ಕುಂಡದಲ್ಲಿ ಲೋಳೆಸರವನ್ನು ಬೆಳಸಿ ಅದರ ಉಪಯೋಗವನ್ನು ಪಡೆದುಕೊಳ್ಳಿ.
ಇದಷ್ಟೆ ಅಲ್ಲದೆ ನಮ್ಮ ಚರ್ಮ ರಕ್ಷಣೆ ಮತ್ತು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇದರ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
Comments