ನಟ ಪುನೀತ್ ರಾಜ್ ಸಮಾಧಿ ದರ್ಶನ ಪಡೆದು ಬಿಕ್ಕಿ, ಬಿಕ್ಕಿ ಅತ್ತ ತಮಿಳು ನಟ ಸೂರ್ಯ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ ಎಂಟು ದಿನಗಳಾಗಿವೆ. ಈ ನಡುವೆ ತಮಿಳು ಸ್ಟಾರ್ ನಟ ಸೂರ್ಯ ಅವರು ಶಿವಣ್ಣನ ಜೊತೆ ಕಠೀರವ ಸ್ಟುಡಿಯೋಗೆ ಭೇಟಿ ನೀಡಿ ಪುನೀತ್ ರಾಜ್ ಸಮಾಧಿ ದರ್ಶನ ಪಡೆದು ಕಣ್ಣಿರಿಟ್ಟಿದ್ದಾರೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಬಹಳ ಅನ್ಯಾಯ. ಈ ರೀತಿ ಆಗಬಾರದಿತ್ತು. ಏನು ಜರುಗಿದೆ ಅದನ್ನು ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಹಾಗೂ ಡಾ. ರಾಜ್ ಕುಮಾರ್ ಅವರ ಕುಟುಂಬ ಬಹಳ ಆತ್ಮೀಯತೆ ಮತ್ತು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅಪ್ಪ ಅವರ ಫ್ಯಾಮಿಲಿ ಜೊತೆ ಕಳೆದಂತಹ ಬಹಳಷ್ಟು ಸಮಯಗಳು ಸದಾ ನೆನಪಾಗುತ್ತಿರುತ್ತದೆ. ನನಗೆ 4 ತಿಂಗಳು ಆಗಿದ್ದಾಗ ಅಪ್ಪುಗೆ 7 ತಿಂಗಳಾಗಿತ್ತು ಎಂದು ಅಮ್ಮ ಹೇಳುತ್ತಿದ್ದ ಮಾತು ನನಗೆ ಈಗಲೂ ಕೂಡ ನೆನಪಿನಲ್ಲಿದೆ. ಅಪ್ಪ, ಅಮ್ಮನ ಯಾವುದೇ ಫೋಟೋ ಅಥವಾ ವೀಡಿಯೋ ನೋಡಿದರೂ ಇಬ್ಬರು ಸದಾ ನಗುತ್ತಲೇ ಇರುವುದನ್ನೇ ಕಾಣುತ್ತೇವೆ.
Comments