ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಸಮಂತಾ - ನಾಗ ಚೈತನ್ಯ

02 Oct 2021 5:00 PM | General
2191 Report

ಟಾಲಿವುಡ್ ನ ಕ್ಯೂಟ್ ಜೋಡಿ ಎಂದೇ ಜನಪ್ರಿಯರಾಗಿದ್ದ ನಾಗಚೈತನ್ಯ ಮತ್ತು ಸಮಂತಾ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಮದುವೆಯಾದ ನಾಲ್ಕು ವರ್ಷಗಳ ನಂತರ ಈ ಜೋಡಿ ಬೇರೆಯಾಗುತ್ತಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಾತನಾಡಿದ ನಾಗ ಚೈತನ್ಯ, ಸಾಕಷ್ಟು ಚರ್ಚೆ ಮತ್ತು ಆಲೋಚನೆಯ ನಂತರ, ಸ್ಯಾಮ್ ಮತ್ತು ನಾನು ನಮ್ಮ ಸ್ವಂತ ಮಾರ್ಗಗಳನ್ನು ಅನುಸರಿಸಲು ಗಂಡ ಮತ್ತು ಹೆಂಡತಿಯಾಗಿ ಬೇರ್ಪಡಲು ನಿರ್ಧರಿಸಿದ್ದೇವೆ. ನಮ್ಮ ಸಂಬಂಧದ ತಿರುಳಾಗಿರುವ ಒಂದು ದಶಕದ ಸ್ನೇಹವನ್ನು ಹೊಂದಿರುವುದು ನಮ್ಮ ಅದೃಷ್ಟ, ಅದು ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ತಿಳಿಸಿದ್ದಾರೆ. ಟಾಲಿವುಡ್ ನ ಜನಪ್ರಿಯ ತಾರೆಯರಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ಹಲವು ವರ್ಷಗಳ ಕಾಲ ಪ್ರೀತಿಸಿ 2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು.

Edited By

venki swamy

Reported By

venki swamy

Comments