ಐಟಿ ದಾಳಿ ಬಳಿಕ ನಟ ಸೋನು ಸೂದ್ ಹೇಳಿದ್ದೇನು ಗೊತ್ತಾ?
ಆದಾಯ ತೆರಿಗೆ ಇಲಾಖೆಯಿಂದ ದಾಳಿಗೆ ಒಳಗಾದ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಹಾಗೂ ಸಮಾಜ ಸೇವಕ ಸೋನು ಸೂದ್ ತಮ್ಮ ಮೌನ ಮುರಿದಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಹಾಗೂ ಗುರುಗಾಂವ್ನಲ್ಲಿ ಸೋನು ಸೂದ್ಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದರು.
ಈ ಕುರಿತಂತೆ ಸೋನು ಸೂದ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ನಿಮ್ಮ ಕಥೆಯನ್ನು ನೀವು ಯಾವಾಗಲೂ ಹೇಳಬೇಕಾಗಿಲ್ಲ. ಅದಕ್ಕೆ ಸಮಯ ಬರುತ್ತದೆ. ನಾನು ನನ್ನ ಸಂಪೂರ್ಣ ಶಕ್ತಿ ಹಾಗೂ ಹೃದಯದಿಂದ ಭಾರತದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಶನ್ನಲ್ಲಿರು ಪ್ರತಿ ಒಂದು ರೂಪಾಯಿಯನ್ನು ಅಮೂಲ್ಯವಾದಂತಹ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ತಲುಪಿಸಲು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಸೋನು ಸೂದ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ ದೆಹಲಿ ಸಿಎಂ ಈ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
Comments