ತಾಲಿಬಾನ್ ನಿಂದ ಕರೆದೊಯ್ಯಲ್ಪಟ್ಟ ಎಲ್ಲಾ ಭಾರತೀಯರು ಸುರಕ್ಷಿತರಾಗಿದ್ದಾರೆ

21 Aug 2021 2:58 PM | General
778 Report

ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ನಿಂದ 150 ಭಾರತೀಯರನ್ನು ಕಿಡ್ನ್ಯಾಪ್ ಮಾಡಿರುವ ಬಗ್ಗೆ ಕಾಬೂಲ್ನ ಭಾರತೀಯ ದೂತಾವಾಸದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ರಾಯಭಾರ ಕಚೇರಿಯ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ದೊರೆತಿದ್ದು, ಈ ಬಗ್ಗೆ ಅಫ್ಘಾನಿಸ್ತಾನದ ಮುಸ್ಲಿಂ ಶಿರಜಾದ್ನಿಂದ ಮಾಡಿರುವ ಟ್ವೀಟ್ ಲಭ್ಯವಾಗಿದೆ. ಆದರೆ, ಭಾರತೀಯರ ಕಿಡ್ನ್ಯಾಪ್ ಆಗಿರುವ ಬಗ್ಗೆ ಈವರೆಗೆ ಭಾರತ ಸರ್ಕಾರ ಖಚಿತಪಡಿಸಿಲ್ಲ. ಜತೆಗೆ, ಭಾರತದ ವಿದೇಶಾಂಗ ಇಲಾಖೆ ಕೂಡಾ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ಬಿತ್ತರವಾಗಿತ್ತು.

ಇದೀಗ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ ಅಹ್ಮದುಲ್ಲಾ ವಾಸಿಖ್ ಅವರು, ವರದಿಗಳನ್ನು ನಿರಾಕರಿಸಿದ್ದಾರೆ. 

ಇದೀಗ ಅಫ್ಘಾನಿಸ್ತಾನ ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದು, ಯಾವುದೇ ಭಾರತೀಯರ ಅಪರಹಣವಾಗಿಲ್ಲ, ಎಲ್ಲರೂ ಸುರಕ್ಷಿತರಾಗಿದ್ದಾರೆ. ಸ್ಥಳಾಂತರಗೊಳ್ಳುತ್ತಿರುವ ಜನರ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿವೆ. 

Edited By

venki swamy

Reported By

venki swamy

Comments