ಶರಿಯಾ ಕಾನೂನು ಎಂದರೇನು? ಈ ಕಾನೂನಿನಲ್ಲಿ ಮಹಿಳೆಯರಿಗೆ ವಿಧಿಸಿರುವ ನಿಯಮಗಳೇನು?

20 Aug 2021 8:20 PM | General
856 Report

ಷರಿಯತ್ ಕಾನೂನು ಎಂಬುದು ಕುರಾನ್, ಫತ್ವಾಗಳಿಂದ ಕೂಡಿದ್ದು ಇಸ್ಲಾಮಿಕ್ ವಿದ್ವಾಂಸರ ತೀರ್ಪುಗಳನ್ನು ಆಧರಿಸಿರುತ್ತದೆ. ಪ್ರಾರ್ಥನೆ, ಉಪವಾಸ, ಬಡವರಿಗೆ ದಾನ ಸೇರಿದಂತೆ ಜೀವನದ ನಿಯಮಗಳನ್ನು ಷರಿಯತ್ ಕಾನೂನು ಹೇಳುತ್ತದೆ.

ದೇವರ ಇಚ್ಛೆಯಂತೆ ಮುಸ್ಲಿಮರು ಹೇಗೆ ಜೀವನ ನಡೆಸಬೇಕು ಎಂದು ವಿವರಿಸುತ್ತದೆ. ಅಪರಾಧವನ್ನು ಹದ್ ಮತ್ತು ತಜೀರ್ ಎಂದು ಎರಡು ವರ್ಗಗಳಾಗಿ ವಿಂಗಡಸಲಾಗಿದೆ. ಹದ್ ಎಂಬುದು ಅಪರಾಧಗಳು ನಿಗದಿತ ದಂಡಗಳೊಂದಿಗೆ ಗಂಭೀರ ಅಪರಾಧಗಳಾಗಿವೆ. ತಜೀರ್ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತೆ. ಶಿಕ್ಷೆಯನ್ನು ನ್ಯಾಯಾಧೀಶರ ವಿವೇಚನೆಗೆ ಬಿಡಲಾಗುತ್ತೆ. ಕಳ್ಳತನ ಹದ್ ಅಪರಾಧಗಳ ವ್ಯಾಪ್ತಿಯಲ್ಲಿದ್ದು, ಅಪರಾಧಿಯ ಕೈಯನ್ನು ಕತ್ತರಿಸುವ ಮೂಲಕ ಶಿಕ್ಷೆಗೆ ಒಳಪಡಿಸಬಹುದು. ಕಲ್ಲೆಸೆಯುವ ಮೂಲಕ ಮರಣದಂಡನೆಯನ್ನು ವಿಧಿಸಬಹುದು. ಆಧುನಿಕ ಯುಗದ ಕಾನೂನುಗಳಂತೆ ಶರಿಯಾ ಕಾನೂನುಗಳು ಲಿಖೀತ ರೂಪದಲ್ಲಿಲ್ಲ. ಅದನ್ನು ಸರ್ಕಾರ ಕೂಡ ಜಾರಿ ಮಾಡುವುದಿಲ್ಲ. ಜತೆಗೆ ನ್ಯಾಯಾಲಯಗಳಲ್ಲಿ ಕೂಡ ಅದರ ಬಗ್ಗೆ ವಿಮರ್ಶೆ ಮಾಡಲಾಗುವುದಿಲ್ಲ.

ಷರಿಯತ್ ಕಾನೂನು ಪ್ರಕಾರ  ಬಾಲಕಿಯರ ಹೊರತಾಗಿ ವಯಸ್ಸಿಗೆ ಬಂದ ಯುವತಿಯರು ಶಿಕ್ಷಣ ಮಾಡುವತ್ತಿಲ್ಲ, ಸಾರ್ವಜನಿಕವಾಗಿ ಮಹಿಳೆಯರು ಒಬ್ಬರೇ ಓಡಾಡುವಂತಿಲ್ಲ ಹಾಗೂ ಕಡ್ಡಾಯವಾಗಿ ಒಬ್ಬ ಪುರುಷನ ನೆರಳಿನಲ್ಲಿರಬೇಕು. ಮೈಗೆ ಅಂಟಿಕೊಳ್ಳಬಹುದಾದ ಅಥವಾ ಅಂಗಾಂಗಗಳು ಕಾಣುವ ರೀತಿಯಲ್ಲಿ ಬಟ್ಟೆಗಳನ್ನು ಧರಿಸುವಂತಿಲ್ಲ.  ಬುರ್ಖಾದ ಮೂಲಕ ಮಹಿಳೆಯರು ಕಡ್ಡಾಯವಾಗಿ ತಲೆಯಿಂದ ಪಾದದವರೆಗೂ ಮುಚ್ಚಿಕೊಂಡಿರಬೇಕು.

Edited By

venki swamy

Reported By

venki swamy

Comments