ಒಬ್ಬರೇ ಕಾರು ಚಲಾಯಿಸುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ: ಹೈಕೋರ್ಟ್ ಮಹತ್ವದ ತೀರ್ಪು

07 Apr 2021 1:44 PM | General
1083 Report

ಈಗ ಎಲ್ಲೆಲ್ಲೂ ಮಾಸ್ಕ್ಗಳದ್ದೇ ಕಾರುಬಾರು. ಬೈಕ್ನಲ್ಲಿ, ಕಾರಿನಲ್ಲಿ ಹೋಗುವಾಗಲೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದೇ ಹೋದರೆ ಆಯಾ ರಾಜ್ಯಗಳಿಗೆ ಅನುಗುಣವಾಗಿ ಭಾರಿ ಪ್ರಮಾಣದ ದಂಡ ವಿಧಿಸಲಾಗುತ್ತಿದೆ.

ಕೋವಿಡ 19 ಸೋಂಕು ಹರಡದಂತೆ ಮಾಸ್ಕ್ "ಸುರಕ್ಷಾ ಕವಚ"ದಂತೆ ಕಾರ್ಯನಿರ್ವಹಿಸಲಿದೆ ಎಂದು  ದೆಹಲಿ ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ. ಕೋವಿಡ್ ಸೋಂಕು ಇರುವ ಸಂದರ್ಭದಲ್ಲಿ ಖಾಸಗಿ ವಾಹನದಲ್ಲಿ ಒಬ್ಬರೇ ಕಾರಿನಲ್ಲಿ ಪ್ರಯಾಣಿಸುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು  ದೆಹಲಿ ಹೈಕೋರ್ಟ್ ಪೀಠ ಹೇಳಿದೆ.

ತಾನು ಏಕಾಂಗಿಯಾಗಿ ವಾಹನ ಚಲಾಯಿಸುವಾಗ ದಿಲ್ಲಿ ಪೊಲೀಸರು ತನ್ನನ್ನು ತಡೆದು ಬಲವಂತದ 500 ರೂ.ದಂಡವನ್ನು ವಿಧಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯವನ್ನು ಸಂಪರ್ಕಿಸಿದ ವಕೀಲ ಸೌರಭ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ಈ ಆದೇಶ ನೀಡಲಾಗಿದೆ.

Edited By

venki swamy

Reported By

venki swamy

Comments