ಸತತ ಎರಡನೇ ದಿನ ಕೊಂಚ ಇಳಿಕೆ ಕಂಡ ತೈಲದರ: ಪೆಟ್ರೋಲ್ 21 ಪೈಸೆ, ಡೀಸೆಲ್ 20 ಪೈಸೆ
ಸತತ ದರ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರು ತುಸು ನಿಟ್ಟಿಸಿರು ಬಿಡುವಂತೆ ಆಗಿದೆ. ಕೋವಿಡ್-19 ಎರಡನೇ ಅಲೆಯ ಪರಿಣಾಮ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸತತ ಎರಡನೇ ಬಾರಿಗೆ ದರ ಇಳಿಕೆಯಾಗಿದೆ.
ಪೆಟ್ರೋಲ್ ದರವನ್ನು 21 ಪೈಸೆ ಕಡಿತಗೊಳಿಸಲಾಗಿದ್ದರೆ, ಡೀಸೆಲ್ ಬೆಲೆಯನ್ನು 20 ಪೈಸೆ ಇಳಿಸಲಾಗಿದೆ. ಕಡಿತದ ನಂತರ, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 90.78 ರೂ., ಕೋಲ್ಕತಾ (ರೂ. 90.98), ಮುಂಬೈ (ರೂ. 97.19), ಚೆನ್ನೈ (ರೂ. 92.77), ಬೆಂಗಳೂರು (93.28 ರೂ.), ಹೈದರಾಬಾದ್ (94.39 ರೂ) ಮತ್ತು ಜೈಪುರ (97.31 ರೂ) ನಗರಗಳಲ್ಲೂ ಬೆಲೆಗಳು ಇಳಿದಿವೆ.
Comments