ಮದ್ಯಪಾನದ ವಯಸ್ಸಿನ ಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ
ಮದ್ಯಪಾನ ಸೇವನೆಯ ಕನಿಷ್ಠ ವಯೋಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸುವ ಪ್ರಸ್ತಾವನೆಗೆ ದಿಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಶೇ.60ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ. ಶೇ. 40ರಷ್ಟು ಖಾಸಗಿ ಮದ್ಯದಂಗಡಿಗಳು ರಾಜ್ಯ ಸರ್ಕಾರಿ ಸ್ವಾಮ್ಯದ ಅಂಗಡಿಗಳಿಗಿಂತ ಹೆಚ್ಚಿನ ಆದಾಯ ನೀಡುತ್ತವೆ. ಆದ್ದರಿಂದ ಸರ್ಕಾರ ಚಿಲ್ಲರೆ ಮದ್ಯ ವ್ಯಾಪಾರದಿಂದ ಹೊರಬರಲಿದೆ ಎಂದರು. ಅಬಕಾರಿ ಇಲಾಖೆಯಲ್ಲಿನ ಸುಧಾರಣೆಗಳ ನಂತರ ಶೇ.20 ರಷ್ಟು ಆದಾಯದ ಹೆಚ್ಚಳವನ್ನು ಅಂದಾಜಿಸಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಚಿವ ಸಂಪುಟ ನಿರ್ಧಾರಗಳನ್ನು ಶ್ಲಾಘಿಸಿದರು ಮತ್ತು ಇದು ದೆಹಲಿಯ ಮದ್ಯ ಮಾಫಿಯಾಕ್ಕೆ ದೊಡ್ಡ ಹೊಡೆತವಾಗಲಿದೆ ಎಂದರು
Comments