ಸರ್ಕಾರ 6 ತಿಂಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಸೆಷ್ಟೆಂಬರ್ 15ಕ್ಕೆ ಮತ್ತೆ ಹೋರಾಟ: ಜಯಮೃತ್ಯುಂಜಯ ಸ್ವಾಮೀಜಿ

17 Mar 2021 1:57 PM | General
280 Report

ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಆರು ತಿಂಗಳಲ್ಲಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದೆ. ಸಮಸ್ಯೆ ಬಗೆ ಹರಿಸದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಂಚಮಸಾಲಿ ಪೀಠದ ಸ್ವಾಮೀಜಿ, ಸಿಎಂ ನಮ್ಮ ವಾಸ ಸ್ಥಳಕ್ಕೆ ಬಂದು ಭರವಸೆ ನೀಡುವುದಾಗಿ ಹೇಳಿದ್ದರು. ನಾವು ವಿಧಾನಸಭೆಯಲ್ಲಿಯೇ ಮಾತು ಕೊಡಬೇಕು ಎಂದು ಹೇಳಿದ್ದೆವು. ಅದರಂತೆ ಸರ್ಕಾರ ಆರು ತಿಂಗಳು ಭರವಸೆ ನೀಡಿದೆ. ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೂ ರಾಜ್ಯ ಪ್ರವಾಸ ಕೈಗೊಂಡು ಜನಜಾಗೃತಿ ಮೂಡಿಸುತ್ತೇವೆ. ಹೋರಾಟ ಸ್ಥಗಿತಕ್ಕೆ ನಮ್ಮವರೇ ಪ್ರಯತ್ನ ನಡೆಸಿದರು. ಆದರೆ, ಜನರ ಬೆಂಬಲದಿಂದ ಯಶಸ್ವಿಯಾಗಿದೆ ಎಂದು ಪರೋಕ್ಷವಾಗಿ ವಚನಾನಂದ ಶ್ರೀ ಹಾಗೂ ಮುರುಗೇಶ್​ ನಿರಾಣಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By

venki swamy

Reported By

venki swamy

Comments