ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ ಜಿಎಸ್ಟಿ ವ್ಯಾಪ್ತಿಗೆ ಇಲ್ಲ: ನಿರ್ಮಲಾ ಸೀತಾರಾಮನ್
ಪೆಟ್ರೋಲ್, ಡಿಸೇಲ್ ಹಾಗೂ ಇಂಧನ ಬೆಲೆಗಳು ದಿನೇದಿನೇ ದರ ಹೆಚ್ಚಳವಾಗುತ್ತಿರುವ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್, ಡಿಸೇಲ್, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ, ವಿಮಾನ ಇಂಧನಗಳನ್ನು ಜಿ ಎಸ್ ಟಿ ವ್ಯಾಪ್ತಿಗೆ ತರುವ ಯಾವುದೇ ಪ್ರಸ್ತಾಪವಿಲ್ಲವೆಂದು ಕೇಂದ್ರ ಸರ್ಕಾರ ಅತ್ಯಂತ ಸ್ಪಷ್ಟಮಾತುಗಳಲ್ಲಿ ಹೇಳಿದೆ.
ಜುಲೈ 1, 2017 ರಂದು ಜಿಎಸ್ಟಿ ತೆರಿಗೆ ವಿಧಾನವನ್ನು ಪರಿಚಯಿಸಿತ್ತು. ಈ ವೇಳೆ ಎಲ್ಲಾ ಸರಕುಗಳನ್ನೂ ಈ ತೆರಿಗೆ ವಿಧಾನದ ಅಡಿಗೆ ತಂದಿದ್ದ ಕೇಂದ್ರ ಸರ್ಕಾರ, ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನ (ಎಟಿಎಫ್) ಸೇರಿದಂತೆ ಹನ್ನೆರಡಕ್ಕು ಹೆಚ್ಚು ಇಂಧನ ಪ್ರಕಾರಗಳನ್ನೂ ಮಾತ್ರ ಜಿಎಸ್ಟಿಯಿಂದ ಹೊರಗಿಟ್ಟಿತ್ತು.
ಕಳೆದೊಂದು ವರ್ಷದ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆಯನ್ನು 12.92 ರು. ಹಾಗೂ ಡೀಸೆಲ್ ಮೇಲಿನ ಸುಂಕವನ್ನು 15.97 ರು.ನಷ್ಟುಏರಿಕೆ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದಾರೆ.
Comments