ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ದೇಶದ ಹಲವೆಡೆ 90 ರುಪಾಯಿ ದಾಟಿದ ಪೆಟ್ರೋಲ್
ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದ್ದು ಗ್ರಾಹಕರು ಪರಿತಪಿಸುವಂತಾಗಿದೆ. ಬುಧವಾರದ ವೇಳೆಗೆ (ಫೆ. 10) ಪೆಟ್ರೋಲ್ ದರದಲ್ಲಿ 70 ಪೈಸೆ ಹಾಗೂ ಡಿಸೇಲ್ ದರದಲ್ಲಿ 27 ಪೈಸೆ ದಾಖಲೆಯ ಏರಿಕೆ ಕಂಡಿದೆ.
ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.60 ರೂ, ಹಾಗೂ ಡೀಸೆಲ್ ಬೆಲೆ 77.73 ರೂ. ತಲುಪಿದೆ. ಇನ್ನೂ ಮುಂಬೈನಲ್ಲಿ ಇಂದಿನ ಏರಿಕೆಯ ನಂತರ ಪೆಟ್ರೋಲ್ ದಾಖಲೆಯ 94.12 ರೂ ಗೆ ಬಂದು ತಲುಪಿದೆ. ಇನ್ನೂ ಡಿಸೇಲ್ ಬೆಲೆ ಇಂದಿನ ಹೆಚ್ಚಳದ ನಂತರ 84.63 ರೂ. ಆಗಿದೆ.
ಕಳೆದ ತಿಂಗಳು ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಫೆಬ್ರವರಿಯಲ್ಲಿ 4ನೇ ತಾರೀಖು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ 37 ಪೈಸೆ ಏರಿಕೆ ಮಾಡಲಾಗಿತ್ತು. ಫೆಬ್ರವರಿ 5ರಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ 37 ಪೈಸೆ ಹೆಚ್ಚಳ ಮಾಡಲಾಗಿತ್ತು. ನಂತರ ಫೆಬ್ರವರಿ 9ರಂದು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ 42 ಪೈಸೆ ಏರಿಕೆ ಮಾಡಲಾಗಿತ್ತು. ಈಗ ಫೆಬ್ರವರಿ 10ರಂದು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ 31 ಪೈಸೆ ಏರಿಕೆ ಮಾಡಲಾಗಿದೆ.
Comments