ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್- ಡೀಸೆಲ್ ದರ ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಮಹಾ ಕ್ರೂರಿ ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ಹಾಗೂ ಕಾಂಗ್ರೆಸ್ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ.
7 ದಿನಗಳ ಕಾಲ ಸ್ಥಿರತೆ ಕಾಪಾಡಿಕೊಂಡಿದ್ದ ಪೆಟ್ರೋಲ್- ಡೀಸೆಲ್ ಬೆಲೆ ಗುರುವಾರ ಮತ್ತೆ ಪ್ರತೀ ಲೀಟರ್‌ಗೆ 35 ಪೈಸೆ ಹೆಚ‍್ಚಳವಾಗಿದೆ. ಇನ್ನು ಬೆಂಗಳೂರಿನಲ್ಲಿ ರು. 89.85, ಕೋಲ್ಕತ್ತಾದಲ್ಲಿ ರು. 88.30, ಮುಂಬೈನಲ್ಲಿ ರು. 93.49 ಹಾಗೂ ಚೆನ್ನೈನಲ್ಲಿ ರು. 89.39 ತಲುಪಿದೆ. ಈ ಮಧ್ಯೆ ಡೀಸೆಲ್ ದರ ಕೂಡ ಮೇಲೇರಿ ಬೆಂಗಳೂರಿನಲ್ಲಿ ರು. 81.76, ನವದೆಹಲಿಯಲ್ಲಿ ಲೀಟರ್ ಗೆ ರು. 77.13, ಕೋಲ್ಕತ್ತಾದಲ್ಲಿ ರು. 80.71, ಮುಂಬೈನಲ್ಲಿ ರು. 83.99 ಹಾಗೂ ಚೆನ್ನೈನಲ್ಲಿ ರು. 82.33 ಆಗಿದೆ.
Comments