ವಿಸ್ಟಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್
ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಯೋಜನೆಯ ಕುರಿತು ಅನೇಕ ಆಕ್ಷೇಪಗಳನ್ನು ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಮಂಗಳವಾರ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಅನುಮೋದನೆ ನೀಡಿದೆ.
ಕೇಂದ್ರ ವಿಸ್ತಾ ಪ್ರದೇಶವನ್ನು ಪುನರ್ ಅಭಿವೃದ್ಧಿಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಈ ಪ್ರಸ್ತಾವನೆಯಲ್ಲಿ ಹೊಸ ಸಂಸತ್ ಭವನ, ಪ್ರಧಾನಮಂತ್ರಿ ಮತ್ತು ಉಪರಾಷ್ಟ್ರಪತಿಗಳಿಗೆ ವಾಸಸ್ಥಾನವಿರುವ ಹೊಸ ವಸತಿ ಸಂಕೀರ್ಣ, ಜೊತೆಗೆ ಹಲವಾರು ಹೊಸ ಕಚೇರಿ ಕಟ್ಟಡಗಳು, ಕೇಂದ್ರ ಸಚಿವಾಲಯವನ್ನು ಒಳಗೊಂಡಿದೆ.
ಪರಿಸರ ಸಚಿವಾಲಯದ ಪರಿಸರ ಅನುಮತಿಯ ಶಿಫಾರಸುಗಳು ಮಾನ್ಯ ಮತ್ತು ಸೂಕ್ತವಾಗಿದೆ ಮತ್ತು ನಾವು ಅದನ್ನು ಎತ್ತಿಹಿಡಿಯುತ್ತೇವೆ ಎನ್ನುವ ಮೂಲಕ ಸುಪ್ರೀಂ ಕೋರ್ಟ್ ಯೋಜನೆಯ ಮುಂದುವರಿಕೆಗೆ ಅಸ್ತು ಎಂದಿದೆ. ಅಲ್ಲದೆ, ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಗಳನ್ನು ಬಳಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
Comments