ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಾಹಲ್

ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮಂಗಳವಾರ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಅವರೊಂದಿಗೆ ಕರ್ಮಾ ಲೇಕ್ ರಸಾರ್ಟ್ನಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.
ಹೊಸದಾಗಿ ಮದುವೆಯಾದವರ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಲ್ಲಿ ಧನಶ್ರೀ ಮರೂನ್ ಲೆಹೆಂಗಾ ಧರಿಸಿದರೆ, ಚಹಲ್ ದಂತ ಶೆರ್ವಾನಿ ಯನ್ನು ಮರೂನ್ ಪೇಟದಿಂದ ಅಲಂಕರಿಸಿದ್ದಾರೆ.ಈ ವರ್ಷದ ಜುಲೈನಲ್ಲಿ ದಂಪತಿಗಳಿಬ್ಬರು ನಿಶ್ಚಿತಾರ್ಥ ಮಾಡಿಕೊಂಡರು.ತದನಂತರ ಧನಶ್ರೀ ಅವರು ಚಹಲ್ ಅವರೊಂದಿಗೆ ಯುಎಇಗೆ ತೆರಳಿದ್ದರು.
ಆಗಸ್ಟ್ನಲ್ಲಿ, ಭಾರತೀಯ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ರೋಕಾ ಸಮಾರಂಭದ ಫೋಟೋಗಳನ್ನು ಧನಶ್ರೀ ವರ್ಮಾ ಅವರೊಂದಿಗೆ ಹಂಚಿಕೊಂಡಿದ್ದರು.
ನಂತರಮಾಧ್ಯಮದೊಂದಿಗೆ ಮಾತನಾಡಿದ ಧನಶ್ರೀ , ಚಹಾಲ್ ಲಾಕ್ ಡೌನ್ ವೇಳೆ ಪರಿಚಿತರಾದರು. ಅವರು ನನ್ನ ಕೆಲಸದ ಕುರಿತು ತಿಳಿದುಕೊಂಡಿದ್ದರು. ಈ ವೇಳೆ ಡ್ಯಾನ್ಸ್ ತರಗತಿಗಳನ್ನು ಕೂಡ ನಡೆಸಿಕೊಟ್ಟಿದ್ದೇನೆ. ನಂತರ ಪರಿಚಯ ಪ್ರೇಮಕ್ಕೆ ತಿರುಗಿ ಈಗ ವಿವಾಹವಾಗಿದೆ ಎಂದಿದ್ದಾರೆ.
Comments