ಕೊರೋನಾ ವಿರುದ್ಧ ಬ್ರಿಟನ್ನಲ್ಲಿ 'ಫೈಜರ್ ಲಸಿಕೆ' ಬಳಕೆಗೆ ಅನುಮೋದನೆ

ಅಂತೂ ಇಂದು ಮಹಾ ಮಾರಿ ಕೊರೋನಾಗೆ ಕೊನೆಗೂ ಮದ್ದು ಸಿಕ್ಕೇ ಬಿಟ್ಟಿದೆ. ಶೇ.95ರಷ್ಟು ಕೊರೋನಾ ಗುಣಪಡಿಸುವಂತ ಫೈಜರ್ ಲಸಿಕೆ ಬಳಕೆಗೆ ಇಂಗ್ಲೆಂಡ್ ಅನುಮತಿ ನೀಡುವ ಮೂಲಕ, ಕೊರೋನಾ ಲಸಿಕೆ ಕಂಡು ಹಿಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮೂಲಕ ಕೊರೋನಾಗೆ ಕೊನೆಗೂ ಲಸಿಕೇ ಬಂದೇ ಬಿಡ್ತು ಎನ್ನುವ ನಿಟ್ಟುಸಿರುವ ಬಿಡುವಂತೆ ಆಗಿದೆ.
ಕೋವಿಡ್-19 ವಿರುದ್ಧ ಅಮೆರಿಕ ಮೂಲದ ಫಿಜರ್ ಮತ್ತು ಜರ್ಮ ಮೂಲದ ಬಯೋನೆಟಿಕ್ ಸಂಸ್ಥೆಗಳು ಜತೆಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಬಳಕೆ ಮಾಡಬಹುದು ಎಂದು ಇಂಡಿಪೆಂಡೆಂಟ್ ಮೆಡಿಸನ್ಸ್ ಆಯಂಡ್ ಹೆಲ್ತ್ಕೆರ್ ಪ್ರಾಡಕ್ಸ್ ರೆಗ್ಯುಲೆಟರಿ ಏಜೆನ್ಸಿ (ಎಂಎಚ್ಆರ್ಎ) ಮಾಡಿದ ಶಿಫಾರಸ್ಸನ್ನು ಸರ್ಕಾರದ ಬುಧವಾರ ಒಪ್ಪಿಕೊಂಡಿದೆ. ಮುಂದಿನ ವಾರದಿಂದ ಬ್ರಿಟನ್ ದೇಶಾದ್ಯಂತ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ಯುಕೆ ಸರ್ಕಾರ ಹೇಳಿದೆ.
ಈ ಲಸಿಕೆಯನ್ನು 8 ಡಿಗ್ರಿ ಸೆಲ್ಸಿಯನ್ಸ್‍ನಲ್ಲಿ ಶೇಖರನೆ ಮಾಡಬೇಕು. ಇದನ್ನು ರೋಗಿಗಳಿಗೆ ನೀಡಿದಾಗ ಐದು ದಿನಗಳಲ್ಲಿ ಪರಿಣಾಮ ಬೀರಲಿದೆ. ಇದರಿಂದ ಯಾವ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಕೂಡ ತಿಳಿಸಲಾಗಿದೆ.
Comments