ರಾಹುಲ್ ಗಾಂಧಿ ಗುಣ 'ಶಿಕ್ಷಕನನ್ನು ಮೆಚ್ಚಿಸಲು ನೋಡುವ ವಿದ್ಯಾರ್ಥಿಯಂತೆ: ಒಬಾಮಾ
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು. 'ಎ ಪ್ರಾಮಿಸ್ಡ್ ಲ್ಯಾಂಡ್' ಪುಸ್ತಕದಲ್ಲಿ ಭಾರತದ ಇಬ್ಬರು ರಾಜಕೀಯ ವ್ಯಕ್ತಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಸಂಸದ ರಾಹುಲ್ ಗಾಂಧಿ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಹುಲ್‌ಗಾಂಧಿಯವರ ಬಗ್ಗೆ ಉಲ್ಲೇಖಿಸಿ, "ಪುಕ್ಕಲು ಮತ್ತು ಅಸ್ಥಿರ ಗುಣಗಳು ಅವರಲ್ಲಿವೆ. ಅಭ್ಯಾಸ ಮಾಡುವ ವಿದ್ಯಾರ್ಥಿಯಂತಿರುವ ಅವರು, ಶಿಕ್ಷಕರ ಮೇಲೆ ಪ್ರಭಾವ ಬೀರಲು ಉತ್ಸುಕನಾದ ವಿದ್ಯಾರ್ಥಿಯಂತಿದ್ದಾರೆ. ಆದರೆ ಆಳಕ್ಕೆ ಇಳಿದರೆ ವಿಷಯದ ಬಗ್ಗೆ ಪರಿಣತಿ ಸಾಧಿಸುವ ಪ್ರವೃತ್ತಿ ಅಥವಾ ಒಲವು ಅವರಿಗೆ ಇಲ್ಲ" ಎಂದು ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವಿಮರ್ಶೆಯಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ರಾಜಕೀಯ ಜೀವನದ ಘಟನಾವಳಿಗಳನ್ನು ನೆನಪಿಸಿಕೊಳ್ಳುತ್ತಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್, ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾರ್ಯವೈಖರಿಯ ಬಗ್ಗೆಯೂ ಬರೆದಿದ್ದಾರೆ.
ಬಾಬ್ ಗೇಟ್ಸ್ ಮತ್ತು ಮನಮೋಹನ್ ಸಿಂಗ್ ಅವರನ್ನು 'ನಿರ್ದಾಕ್ಷಿಣ್ಯ, ಸಮಗ್ರ ದೃಷ್ಟಿಕೋನವುಳ್ಳ ಪ್ರಭಾವಶಾಲಿ ವ್ಯಕ್ತಿಗಳು' ಎಂದೂ ಬಣ್ಣಿಸಿದ್ದಾರೆ.
Comments