ದೀಪಾವಳಿ ನಂತರ ಶಾಲೆ ಆರಂಭ ದಿನಾಂಕ ನಿಗದಿ?
ಬೆಂಗಳೂರು: ರಾಜ್ಯದಲ್ಲಿ 9 ರಿಂದ 12 ನೇ ತರಗತಿ ಮಕ್ಕಳಿಗೆ ಡಿಸೆಂಬರ್ 15 ರಿಂದ ಶಾಲೆ-ಕಾಲೇಜು ಆರಂಭವಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಪೋಷಕರು ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರು ಶಾಲೆಗಳ ಆರಂಭಕ್ಕೆ ಸಮ್ಮತಿಸಿದ್ದು, ದೀಪಾವಳಿ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೊದಲ ಹಂತದಲ್ಲಿ 10, 12ನೇ ತರಗತಿಗೆ ಅವಕಾಶ ನೀಡಲಾಗುವುದು. 15 ದಿನ ಬಿಟ್ಟು 9,11ನೇ ತರಗತಿ ನಡೆಸಲಾಗುವುದು. ಬೆಳಿಗ್ಗೆ 7ರಿಂದ 12ರವರೆಗೆ 10, 12ನೇ ಕ್ಲಾಸ್, ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ 9,11ನೇ ಕ್ಲಾಸ್ ನಡೆಸಲಾಗುವುದು ಎನ್ನಲಾಗಿದೆ.
ಯಾವುದೇ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಲ್ಲಿ ಆ ಸಮಯದಲ್ಲಿ ಶಾಲಾಡಳಿತ, ಸರ್ಕಾರ ಚಿಕಿತ್ಸಾ ಖರ್ಚು-ವೆಚ್ಚ ಭರಿಸುವುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದು.ಶಿಕ್ಷಕರು, ಎಲ್ಲಾ ಸಿಬ್ಬಂದಿಗಳಿಗೂ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡುವುದು. 15 ದಿನಗಳಿಗೊಮ್ಮೆ ಮರು ಪರೀಕ್ಷೆ ನಡೆಸುವುದು.
Comments