ವಾಟ್ಸಪ್ ಮೂಲಕವೇ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

ನವೆಂಬರ್ 1ರಿಂದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ಡೆಲಿವರಿ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಪಿಜಿ ಗ್ರಾಹಕರ ಅನುಕೂಲಕ್ಕಾಗಿ ಇಂಡೇನ್ ಆಯಿಲ್ ಕೆಲವು ಬದಲಾವಣೆಗಳನ್ನು ತಂದಿದೆ.
ಸಿಲಿಂಡರ್ ಕಾಯ್ದಿರಿಸಲು ಇಂಡೇನ್ ಗ್ಯಾಸ್ ಗ್ರಾಹಕರ ಫೋನ್ ಸಂಖ್ಯೆ ಬದಲಾಗಿದೆ. ಇಂಡೇನ್ ಗ್ಯಾಸ್ ರಿಫಿಲ್ ಬುಕ್ ಮಾಡಲು ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಹೊಸ ಸಂಖ್ಯೆಯನ್ನು ಕಳಿಸಲಾಗಿದೆ. ಇದರ ಹೊರತಾಗಿ ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.
ಇಂಡೇನ್ ಆಯಿಲ್ ಗ್ಯಾಸ್ ಏಜೆನ್ಸಿ ಅಥವಾ ಡಿಸ್ಟ್ರಿಬ್ಯೂಟರ್ ಜೊತೆ ನೇರವಾಗಿ ಮಾತನಾಡುವ ಮೂಲಕ ಸಿಲಿಂಡರ್ ಬುಕ್ ಮಾಡಬಹುದು. ಗ್ಯಾಸ್ ಏಜೆನ್ಸಿಯವರಿಗೆ ಫೋನ್ ಮಾಡಿ ಬುಕ್ ಮಾಡಬಹುದು. ಇಂಡೇನ್ ಆಯಿಲ್ನ ಈ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಕೂಡ ಸಿಲಿಂಡರ್ ಬುಕ್ ಮಾಡಬಹುದು.ಇಂಡೇನ್ ಆಯಿಲ್ ಕಂಪನಿಯ 7588888824 ವಾಟ್ಸಾಪ್ ನಂಬರ್ಗೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಿಂದ ಮೆಸೇಜ್ ಕಳುಹಿಸಿ ಬುಕ್ ಮಾಡಬಹುದು. ಇಂಡೇನ್ ಆಯಿಲ್ ಆಯಪ್ ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಕೂಡ ಸಿಲಿಂಡರ್ ಬುಕ್ ಮಾಡಬಹುದು.
ಇಂಡೇನ್ ಆಯಿಲ್ ಗ್ರಾಹಕರು 7588888824 ನಂಬರ್ಗೆ ವಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿ, ಎಲ್ಪಿಜಿ ಸಿಲಿಂಡರ್ ಬುಕ್ ಮಾಡಬಹುದು. REFILL ಎಂದು ಟೈಪ್ ಮಾಡಿ, ನಿಮ್ಮ ರಿಜಿಸ್ಟರ್ಡ್ ನಂಬರ್ನಿಂದ 7588888824 ನಂಬರ್ಗೆ ವಾಟ್ಸಾಪ್ನಲ್ಲಿ ಮೆಸೇಜ್ ಕಳುಹಿಸಿದರೆ ಸಿಲಿಂಡರ್ ಬುಕ್ ಆಗುತ್ತದೆ. ನಿಮ್ಮ ನಂಬರ್ಗೆ ಬಂದ ಓಟಿಪಿಯನ್ನು ಹೇಳಿದ ನಂತರ ಡೆಲಿವರಿ ಬಾಯ್ ನಿಮಗೆ ಸಿಲಿಂಡರ್ ಡೆಲಿವರಿ ನೀಡುತ್ತಾನೆ.
Comments