ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಸಿದ್ದಾರ್ಥ ಪುತ್ರ ಅಮಾರ್ತ್ ಮದುವೆಗೆ ಡೇಟ್ ಫಿಕ್ಸ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ದಿವಂಗತ ಸಿದ್ಧಾರ್ಥ್ ಹೆಗಡೆ ಪುತ್ರ ಅಮರ್ತ್ಯ ಹೆಗಡೆ ಮದುವೆಗೆ ಡೇಟ್ ಫಿಕ್ಸ್ ಆಗಿದ್ದು, ಫೆ. 24, 2021 ರಂದು ಮದುವೆ ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ.
ಏಪ್ರಿಲ್ 15ರಂದು ಶಿವಕುಮಾರ್ ಅವರ ಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಐಶ್ವರ್ಯಾ ಮತ್ತು ಅಮರ್ತ್ಯ ಉಂಗುರ ಬದಲಾಯಿಸಿಕೊಂಡಿದ್ದರು. ನವೆಂಬರ್ ನಲ್ಲಿ ಇಬ್ಬರ ನಿಶ್ಚಿತಾರ್ಥ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ನಿಶ್ಚಿತಾರ್ಥ ಮತ್ತು ಮದುವೆಯನ್ನ ಬಹುತೇಕ ಬೆಂಗಳೂರು ಅರಮನೆಯಲ್ಲಿ ವಿವಾಹ ಮಹೋತ್ಸವ ಜರುಗಲಿದೆ. ಕೊವಿಡ್ 19 ಕಾರಣದಿಂದ ನಿಯಮಗಳನ್ನು ಪಾಲಿಸಿಕೊಂಡು ಎರಡು ಮನೆಯವರು ಶಾಸ್ತ್ರ, ಸಂಪ್ರದಾಯ ಪಾಲನೆ ಜೊತೆಗೆ ಮದುವೆ ಕಾರ್ಯ ನೆರವೇರಿಸಲು ನಿರ್ಧರಿಸಿದ್ದಾರೆ. ಮೂಡಿಗೆರೆಯ ಚೇತನಾ ಎಸ್ಟೇಟ್, ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಗಳಲ್ಲಿ ಎರಡು ಕುಟುಂಬದ ಮನೆ ಮಟ್ಟಿಗೆ ಶಾಸ್ತ್ರಗಳು ನಡೆಯಲಿವೆ.
Comments