ಕುತೂಹಲ ಮೂಡಿಸಿದ ಕಿಚ್ಚನ ಜೊತೆ ಇಂದ್ರಜಿತ್ ಸಿದ್ಧಗಂಗಾ ಮಠ ಭೇಟಿ
ಸ್ಯಾಂಡಲ್ ವುಡ್ ನಟ ಸುದೀಪ್ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಿದ್ದಗಂಗಾ ಮಠಕ್ಕೆ ಸುದೀಪ್ ಮತ್ತು ಇಂದ್ರಜೀತ್ ಲಂಕೇಶ್ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದುಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ನಡೆಯುತ್ತಿರುವ ಬೆನ್ನಲ್ಲೇ ನಟ ಸುದೀಪ್, ಇಂದ್ರಜಿತ್ ಲಂಕೇಶ್ ಜತೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿರುವ ಸಂಗತಿ ವಿಶೇಷವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ನಾಲ್ಕು ತಿಂಗಳ ಹಿಂದೆಯೇ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಬಗ್ಗೆ ನಾನು ಇಂದ್ರಜಿತ್ ಜತೆ ಮಾತನಾಡಿದ್ದೆ. ಅದರಂತೆ ಫ್ಯಾಂಟಮ್ ಚಿತ್ರದ ಚಿತ್ರೀಕರಣದಿಂದ ಎರಡು ದಿನ ಬಿಡುವಿತ್ತು. ಹೀಗಾಗಿ ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ್ದೆ. ಹೀಗಾಗಿ ಮೊದಲು ನಿಗದಿಯಾಗಿದ್ದಂತೆಯೇ ಇಂದು ಇಬ್ಬರೂ ಮಠಕ್ಕೆ ಭೇಟಿ ನೀಡಿದ್ದೇವೆ ಎಂದರು.
ನಿಮ್ಮ ಶುಭಾಶಯಗಳು ನನಗೆ ಮುಖ್ಯವಾದದ್ದೇ ಹಾಗೂ ನಾನು ಹೇಳಿದಂತೆ ಬೃಹತ್ ಸಂಖ್ಯೆಯಲ್ಲಿ ಬರುವ ನಿಮ್ಮನ್ನು ಕಾಣುವ ಸಂತೋಷವನ್ನು ಬೇರೆ ಯಾವುದೂ ನನಗೆ ನೀಡುವುದಿಲ್ಲ. ನಾನು ಖಚಿತವಾಗಿ ಹೇಳುತ್ತೇನೆ ಬಹಳ ಬೇಗ ಆ ದಿನವೂ ಬರುತ್ತದೆ ಹಾಗೂ ನಾವು ಮತ್ತೆ ಭೇಟಿಯಾಗುತ್ತೇವೆ. ಆದರೆ ಸದ್ಯಕ್ಕೆ ನಿಮ್ಮಲ್ಲಿ ಕೋರುವುದೇನೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಎಲ್ಲೂ ಹುಟ್ಟುಹಬ್ಬ ಆಚರಿಸಬೇಡಿ. ಯಾವುದೇ ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಗಳು ಬೇಡ. ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶದ ಕೆಲವರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.
Comments