ಜಿಯೋದಲ್ಲಿ 33,737 ಕೋಟಿ ರೂ ಹೂಡಿಕೆ ಮಾಡಿದ ಗೂಗಲ್

ರಿಲಯನ್ಸ್ ಇಂಡಸ್ಟ್ರೀಸ್ ನ ಡಿಜಿಟಲ್ ಉದ್ಯಮವಾದ ರಿಲಯನ್ಸ್ ಜಿಯೋ ಲಿಮಿಟೆಡ್ ನಲ್ಲಿ 33,737 ಕೋಟಿ ರೂ. (4.5 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ಜಾಗತಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ 43ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಯಲ್ಲಿ ಮಾತನಾಡುತ್ತಾ, ಮುಕೇಶ್ ಅಂಬಾನಿ ಈ ಹೊಸ ಒಪ್ಪಂದವನ್ನು ಘೋಷಿಸಿದ್ದಾರೆ.
ಈ ಕುರಿತು ಗೂಗಲ್ ಮತ್ತು ರಿಲಾಯನ್ಸ್ ಕಂಪನಿಗಳ ನಡುವೆ ಕೆಲವು ದಿನಗಳಿಂದ ಚರ್ಚೆ ನಡೆದಿತ್ತು. ಇದೀಗ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಈಗಾಗಲೇ ಜಿಯೋ ಪ್ಲಾಟ್ಫಾರ್ಮ್ನಲ್ಲಿ ಫೇಸ್ಬುಕ್, ಕ್ವಾಲ್ಕಾಮ್ ವೆಂಚರ್ಸ್ ಮುಂತಾದ 12ಕ್ಕೂ ಹೆಚ್ಚು ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಿವೆ.
ಅಲಿಬಾಬಾ ರೀತಿಯಲ್ಲಿ ಸ್ವದೇಶಿ ದೈತ್ಯ ಸಂಸ್ಥೆಯೊಂದನ್ನು ಕಟ್ಟಿ ನಿಲ್ಲಿಸುವುದು ಮುಕೇಶ್ ಅಂಬಾನಿಯ ಗುರಿಯಾಗಿದೆ. 130 ಕೋಟಿ ಜನರಿರುವ ದೇಶದಲ್ಲಿ ಆನ್‌ಲೈನ್ ಚಿಲ್ಲರೆ ವ್ಯಾಪಾರ, ಕಂಟೆಂಟ್ ಸ್ಟ್ರೀಮಿಂಗ್, ಡಿಜಿಟಲ್ ಪಾವತಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯನ್ನು ಅಂಬಾನಿ ಹಾಕಿಕೊಂಡಿದ್ದಾರೆ.
Comments