ಬಿಎಸ್ 4 ವಾಹನ ಖರೀದಿಸಿದವರಿಗೆ ಶಾಕಿಂಗ್ ನ್ಯೂಸ್

09 Jul 2020 10:42 AM | General
478 Report

ದೆಹಲಿ ಎನ್ ಸಿಆರ್ ಹೊರತುಪಡಿಸಿ ದೇಶಾದ್ಯಂತ ಲಾಕ್ಡೌನ್ ಮುಕ್ತಾಯವಾದ ಬಳಿಕ 10 ದಿನಗಳ ವರೆಗೆ ಬಿಎಸ್-4 ಅನುಸರಣೆಯ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿ ಮಾರ್ಚ್ 27ರಂದು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ವಾಪಾಸು ಪಡೆದಿದೆ.

ಆಗಲೇ ವಾಹನಗಳ ಡೀಲರ್ ಬಳಿ ಅಪಾರ ಸಂಖ್ಯೆಯಲ್ಲಿ ಬಿಎಸ್-4 ಮಾನದಂಡ ಹೊಂದಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಸ್ಟಾಕ್ ಉಳಿದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಡೀಲರ್ ಗಳು BS-4 ಮಾನದಂಡ ಹೊಂದಿರುವ ವಾಹನಗಳ ಮಾರಾಟ ಮತ್ತು ನೋಂದಣಿಗೆ ಡೆಡ್ ಲೈನ್ ವಿಸ್ತರಣೆಗೆ ಆಗ್ರಹಿಸಿ ಸುಪ್ರೀಂ ಕದ ತಟ್ಟಿದ್ದರು. ಡೀಲರ್ ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯ, ಶೇ.10 ರಷ್ಟು BS-4 ಮಾನದಂಡ ಹೊಂದಿರುವ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿ, ಲಾಕ್ ಡೌನ್ ನಂತರ 10 ದಿನಗಳಲ್ಲಿ ಈ ವಾಹನಗಳ ಮಾರಾಟ ಮಾಡಬಹುದಾಗಿದೆ ಎಂದು ಹೇಳಿತ್ತು.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಹಲವು ಬಿಎಸ್ 4 ವಾಹನಗಳನ್ನು ಮಾರಾಟ ಮಾಡಿದ್ದು ನಿಯಮಗಳ ಉಲ್ಲಂಘನೆಯಾಗಿದೆ. ಇದರೊಂದಿಗೆ ಕೋರ್ಟ್ ಆದೇಶದ ಉಲ್ಲಂಘನೆ ಕೂಡ ಆಗಿದೆ ಎಂದು ಹೇಳಿರುವ ನ್ಯಾಯಪೀಠ, ಬಿಎಸ್ 4 ಶ್ರೇಣಿಯ ವಾಹನಗಳ ಮಾರಾಟಕ್ಕೆ ನೀಡಿದ 10 ದಿನಗಳ ಹೆಚ್ಚುವರಿ ಅನುಮತಿಯನ್ನು ಹಿಂಪಡೆದುಕೊಂಡಿದೆ ಎಂದು ಹೇಳಲಾಗಿದೆ.

Edited By

venki swamy

Reported By

venki swamy

Comments