ಭಾರತ ನಿರ್ಮಿತ ಕೋವಿಡ್ ಲಸಿಕೆ ಆಗಸ್ಟ್ 15 ರೊಳಗೆ ಬಿಡುಗಡೆಗೆ..?

ದೇಶದಲ್ಲಿ ಕೋವಿಡ್ ವೈರಸ್ ಹಾವಳಿ ಆಘಾತಕಾರಿ ಮಟ್ಟದಲ್ಲಿ ಉಲ್ಬಣಗೊಂಡು ಸೋಂಕು ಮತ್ತು ಸಾವು ವ್ಯಾಪಕವಾಗುತ್ತಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಬರುವ ಆಗಸ್ಟ್ 15ರ ವೇಳೆಗೆ ಕೊರೋನಾಗೆ ಭಾರತೀಯ ಔಷಧಿ ಸಿದ್ದವಾಗಲಿದೆ. ಹೀಗೊಂದು ಸುಳಿವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬಿಟ್ಟುಕೊಟ್ಟಿದೆ.
ಐಸಿಎಂಆರ್,ಕ್ಲಿನಿಕಲ್ ಪ್ರಯೋಗಗಳನ್ನು ಹೆಚ್ಚಿಸಲು ಸಂಸ್ಥೆಗಳನ್ನು ಕೇಳಿಕೊಂಡಿದೆ. ಏಕೆಂದರೆ ಇದು ಸರಕಾರದ ಉನ್ನತಮಟ್ಟದ ಮೇಲ್ವಿಚಾರಣೆ ಮಾಡುವ 'ಆದ್ಯತೆಯ ಯೋಜನೆ'ಯಾಗಿದೆ. ಎಲ್ಲಾ ಹಂತದ ಪ್ರಯೋಗಗಳು ಯಶಸ್ವಿಯಾದರೆ ಆಗಸ್ಟ್ 15ರಂದು ಕೊರೋನಾ ಹೆಮ್ಮಾರಿ ವಿರುದ್ಧ ಭರ್ಜರಿ ದ ಜಯ ಸಾಧಿಸಿದಂತಾಗುತ್ತದೆ. ಆ ದಿನ ಆದಷ್ಟು ಬೇಗ ಬರಲಿ, ವೈದ್ಯರು-ವಿಜ್ಞಾನಿಗಳ ಪರಿಶ್ರಮ ಯಶಸ್ವಿಯಾಗಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.
Comments