ಸತತ 9ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ
ದೇಶದಲ್ಲಿ ಸತತ ಒಂಬತ್ತನೇ ದಿನವೂ ತೈಲದರದಲ್ಲಿ ಏರಿಕೆ ಕಂಡಿದೆ. ಕೋವಿಡ್-19 ಲಾಕ್ ಡೌನ್ ನಿಂದ ಕಂಗೆಟ್ಟಿರುವ ಗ್ರಾಹಕರಿಗೆ ಈ ಸತತ ದರ ಏರಿಕೆ ಬೆಳವಣಿಗೆ ಆಘಾತ ನೀಡಿದೆ.
ಸೋಮವಾರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 48 ಪೈಸೆ, ಡೀಸೆಲ್ ದರ ಪ್ರತಿ ಲೀಟರ್ ಗೆ 59 ಪೈಸೆಯಷ್ಟು ಹೆಚ್ಚಳವಾಗಿದೆ. ದೈನಂದಿನ ತೈಲ ಬೆಲೆ ಪರಿಷ್ಕರಣೆ ಆರಂಭವಾದ ನಂತರದಲ್ಲಿ ಅತ್ಯಧಿಕ ಏರಿಕೆ ಇದಾಗಿದೆ. ಕಳೆದ 9 ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 5 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ದರ ಈ ಮಟ್ಟವನ್ನು ತಲುಪಿದ್ದು ಕಚ್ಚಾ ತೈಲ ದರವು ದಾಖಲೆಯ ಎತ್ತರದಲ್ಲಿ ಇದ್ದಾಗ. ಕಳೆದ ತಿಂಗಳು ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ಲೀಟರ್ ಗೆ 10 ರುಪಾಯಿ ಹಾಗೂ ಡೀಸೆಲ್ ಮೇಲೆ 13 ರುಪಾಯಿ ಏರಿಕೆ ಮಾಡಿತ್ತು. ಇದನ್ನು ಹೊರತುಪಡಿಸಿ, ಹಲವು ರಾಜ್ಯ ಸರ್ಕಾರಗಳು ಪೆಟ್ರೋಲ್ ಮೇಲಿನ ವ್ಯಾಟ್ ಅಥವಾ ಸೆಸ್ ಏರಿಸಿದ್ದವು.
Comments