ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಜನರ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ತಿರುಪತಿ ಲಡ್ಡು

ಕೊರೋನಾವೈರಸ್ ಲಾಕ್ಡೌನ್ ಹೊರತಾಗಿಯೂ, ತಿರುಮಲ ವೆಂಕಟೇಶ್ವರನ ಭಕ್ತಾದಿಗಳು ಬೆಂಗಳೂರು, ಹೈದರಾಬಾದ್ ಚೆನ್ನೈ, ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಪವಿತ್ರ 'ಲಡ್ಡು ಪ್ರಸಾದಗಳನ್ನು ಪಡೆಯಲಿದ್ದಾರೆ ಎಂದು ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ಹೇಳಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 20ರಿಂದ ತಿಮ್ಮಪ್ಪನ ಬೆಟ್ಟ ಏರುವುದನ್ನು ಮತ್ತು ವೆಂಕಟೇಶ್ವರ ದರ್ಶನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಲಡ್ಡು ನೀಡಲು ಕ್ರಮ ಕೈಗೊಳ್ಳಲಾಗಿದೆ. ಆಯಾ ಸ್ಥಳಗಳಿಗೆ ತಿರುಪತಿ ಲಡ್ಡು (Tirupati Laddu) ಆಗಮಿಸುವ ದಿನಾಂಕವನ್ನು ಮೂರು ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಟಿಟಿಡಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಟಿಟಿಡಿ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ರೆಡ್ಡಿ ನಿರಾಕರಿಸಿದ್ದಾರೆ.ಕಳೆದ ಎರಡು ತಿಂಗಳಿನಿಂದ ಸಂಬಳ ನೀಡಲಾಗುತ್ತಿದ್ದು, ಮೇ ಮತ್ತು ಜೂನ್‌ಗೂ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
Comments