ಇಂದಿನಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭ
ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧ ತೆರವುಗೊಳಿಸಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದೇ ವೇಳೆ ಬಸ್ ಸಂಚಾರವು ಆರಂಭವಾಗಿದೆ. ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಜಿಲ್ಲೆಗಳ ಒಳಗೆ ಸಂಚರಿಸುತ್ತಿದ್ದ ಬಸ್ ಗಳು ಇಂದಿನಿಂದ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿಯೂ ಸಂಚರಿಸಲಿವೆ. ಇಂದಿನಿಂದ ಜಿಲ್ಲೆಗಳ ನಡುವೆ ಬಸ್ ಸಂಚಾರ ಆರಂಭವಾಗಿದ್ದು, ಇದರೊಂದಿಗೆ ನಗರ ಸಾರಿಗೆ, ಗ್ರಾಮಾಂತರ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ.ಇಂದಿನಿಂದ 1500 ಬಸ್ ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂದರೆ ಶೇ. 25 ಬಸ್ ಸಂಚಾರ ಆರಂಭಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ನಂತರ ಹಂತಹಂತವಾಗಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಲು ಚಿಂತಿಸಲಾಗಿದೆ. ಬೆಂಗಳೂರಿನಿಂದ ಹೊರಡುವ ಬಸ್ಗಳು ಸಂಜೆ 7 ಗಂಟೆಯೊಳಗೆ ನಿಗದಿತ ನಿಲ್ದಾಣ ತಲುಪಬೇಕು. ಸಂಜೆ 7 ಗಂಟೆ ನಂತರ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಸಂಜೆ 4 ಗಂಟೆಯೊಳಗೆ ಬೆಂಗಳೂರಿನಿಂದ ಎಲ್ಲ ಬಸ್ಸುಗಳು ಹೊರಡಲಿವೆ. ಬಸ್ ಪ್ರಯಾಣ ದರ ಯಥಾಸ್ಥಿತಿ ಇರಲಿದೆ.
Comments