ಬಾಗಲಕೋಟೆಯಲ್ಲಿ ತಾಯ್ತನಕ್ಕೆ ಮುಳುವಾದ ಕೊರೊನಾ ವೈರಸ್

ಕೊರೋನಾ ವೈರಸ್ ಮಕ್ಕಳು-ವೃದ್ಧರೆನ್ನದೆ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ಬಾಗಲಕೋಟೆಯಲ್ಲಿ ಚೊಚ್ಚಲ ಹೆರಿಗೆಯ ನಿರೀಕ್ಷೆಯಲ್ಲಿದ್ದ ಗರ್ಭಿಣಿಯ ಆಸೆಗೆ ಮಹಾಮಾರಿ ಕರೊನಾ ವೈರಸ್ ತಣ್ಣೀರೆರಚಿದೆ. ಸೊಂಕಿತ ಮಹಿಳೆಯ ಗರ್ಭಪಾತಕ್ಕೆ ವೈದ್ಯರು ಮುಂದಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಢಾಣಕ ಶಿರೂರು ಗ್ರಾಮದ 5 ತಿಂಗಳ ಗರ್ಭಿಣಿಯಾಗಿದ್ದ 23 ವರ್ಷದ ಮಹಿಳೆಗೆ ಕೊರೊನಾ ಪತ್ತೆಯಾಗಿತ್ತು. ಗರ್ಭಿಣಿಯ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗಿ ಸುಸ್ತು ಹೆಚ್ಚಾಗುತ್ತಿದ್ದು. ದೇಹದಲ್ಲಿ ಹಿಮೋಗ್ಲೋಬಿನ್ ಅಂಶವೂ ಕಡಿಮೆಯಾಗುತ್ತಿದೆ. ಅಲ್ಲದೇ ಮೂತ್ರದ ತೊಂದರೆ ಹಾಗೂ ಅಲ್ಸರ್ ಸಮಸ್ಯೆಯಿಂದ ಗರ್ಭಿಣಿ ಆರೋಗ್ಯದಲ್ಲಿ ಏರಿಳಿತವಾಗುತ್ತಿದ್ದು. ಹೊಟ್ಟೆಯಲ್ಲಿದ್ದ ಮಗುವಿನಿಂದ ಆಕೆಯ ಆರೋಗ್ಯ ಇನ್ನಷ್ಟು ಹದಗೆಡುತ್ತಿತ್ತು. ಅಲ್ಲದೆ, ಮಗುವಿಗೂ ಕೊರೋನಾದಿಂದ ಅಪಾಯವಾಗುವ ಸಾಧ್ಯತೆಯಿತ್ತು. ಹೀಗಾಗಿ, ಗರ್ಭಿಣಿಯ ಮನವೊಲಿಸಿ, ಆಕೆಯ ಕುಟುಂಬದವರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ರಹಿತ ಗರ್ಭಪಾತ ಮಾಡಲಾಗಿದೆ.
Comments