ಸೀಜ್ ಅದ ವಾಹನಗಳಿಗೆ ಎಷ್ಟು ಫೈನ್? ; ನಿಮ್ಮ ಗಾಡಿ ವಾಪಾಸ್ ಪಡೆಯೋದು ಹೇಗೆ?

ನಗರದಲ್ಲಿ ಲಾಕ್ಡೌನ್ ಆದೇಶ ಮೀರಿದ ಒಟ್ಟು 47 ಸಾವಿರ ಜನರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸೀಜ್ ಆದ ಗಾಡಿಯನ್ನು ಹಿಂಪಡೆದುಕೊಳ್ಳುವುದು ಹೇಗೆ ಎನ್ನುವ ಚಿಂತೆ ಮಾಲೀಕರನ್ನು ಕಾಡಿತ್ತು. ಈಗ ಬೆಂಗಳೂರು ಪೊಲೀಸ್ ಇಲಾಖೆ ಇದಕ್ಕೆ ಪರಿಹಾರ ಸೂಚಿಸಿದ್ದು, ಶೀಘ್ರವೇ ಸೀಜ್ ಮಾಡಿದ ವಾಹನ ಹಿಂದಿರುಗಿಸುವುದಾಗಿ ಹೇಳಿದೆ.
ಹೈಕೋರ್ಟ್ ನೀಡಿರುವ ಆದೇಶದಲ್ಲಿ ಲಾಕ್‍ಡೌನ್ ವೇಳೆ ಸೀಜ್ ಮಾಡಲಾದ ವಾಹನಗಳಿಗೆ ಫೈನ್ ಹಾಕಿ ರಿಲೀಸ್ ಮಾಡಬೇಕು. ಅದರಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಒಂದು ಸಾವಿರ ದಂಡ ಮತ್ತು ದ್ವಿಚಕ್ರ ಮತ್ತು ಆಟೋ ರಿಕ್ಷಾಗಳಿಗೆ 500 ದಂಡ ವಿಧಿಸಬೇಕು. ಜೊತೆಗೆ ಇನ್ಶೂರೆನ್ಸ್ ಸೇರಿದಂತೆ ವಾಹನದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ವಾಹನಗಳನ್ನು ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.
“ಮೇ 1ರ ನಂತರ ಸೀಜ್ ಮಾಡಿದ ವಾಹನವನ್ನು ಅವರವರ ಮಾಲೀಕರಿಗೆ ಹಿಂದಿರುಗಿಸುತ್ತಿದ್ದೇವೆ. ಹಂತಹಂತವಾಗಿ ವಾಹನ ಹಸ್ತಾಂತರ ಮಾಡಲಾಗುತ್ತದೆ. ಮೊದಲು ಸೀಜ್ ಆದ ವಾಹನಗಳನ್ನು ಆದ್ಯತೆಯ ಮೇರೆಗೆ ಕ್ರಮವಾಗಿ ಹಸ್ತಾಂತರಿಸಲಾಗುವುದು ಎಂದು ಬಾಸ್ಕರ್ ರಾವ್ ತಿಳಿಸಿದ್ದಾರೆ.
Comments