ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್..!
ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಅಗತ್ಯ ವಸ್ತುಗಳಾದ ದಿನಸಿ, ಮೆಡಿಕಲ್ ಸೇರಿದಂತೆ ಇತರೇ ಅತ್ಯವಶ್ಯಕ ವಸ್ತುಗಳಷ್ಟೇ ಲಭ್ಯವಾಗುತ್ತಿದೆ. ಇನ್ನು ಬಾರ್, ಪಬ್, ಮಾಲ್ ಗಳು ಬಂದ್ ಆಗಿದ್ದು, ಮದ್ಯಪ್ರಿಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ನಿಷಿದ್ಧ ಮೇ.3ರ ಬಳಿಕವೂ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತಂತೆ PÉÃAzÀæ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮದ್ಯ ಸೇವನೆಯಿಂದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕುಸಿಯಲಿದೆ. ಸದ್ಯ ಕೊರೊನಾ ಸ್ಥಿತಿ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಮದ್ಯ ಪ್ರಿಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊರೋನಾ ಸಂಕಷ್ಟ ಬಗೆಹರಿದು ಲಾಕ್ಡೌನ್ ಮುಕ್ತಾಯವಾಗುವವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲವೆಂದು ಹೇಳಲಾಗುತ್ತಿದೆ.
Comments