ಕೊರೊನಾ ವೈರಸ್ ಹರಡುವವರನ್ನು ಗುಂಡಿಟ್ಟು ಸಾಯಿಸಿ: ಶಾಸಕ ರೇಣುಕಾಚಾರ್ಯ

ಕೊರೊನಾ ವೈರಸ್ ವಿರುದ್ಧ ಇಡೀ ದೇಶ ಹೋರಾಡುತ್ತಿರುವಾಗ ವೈರಸ್ ಹರಡುತ್ತಿರುವುದು ದೇಶದ್ರೋಹ. ಇದು ಪರೋಕ್ಷವಾಗಿ ಭಯೋತ್ಪಾದನೆಯೇ ಸರಿ. ಹೀಗಾಗಿ ಕೊರೊನಾ ವೈರಸ್ ಹರಡುವವರನ್ನು ಗುಂಡಿಟ್ಟು ಸಾಯಿಸಿದರೂ ತಪ್ಪೇನಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಕೊರೊನಾ ವೈರಸ್ ವಿರುದ್ಧ ಇಡೀ ದೇಶ ಹೋರಾಡುತ್ತಿರುವಾಗ ವೈರಸ್ ಹರಡುವುದು ದೇಶದ್ರೋಹ. ಇದು ಪರೋಕ್ಷ ಭಯೋತ್ಪಾದನೆ ಎಂದರು ಕ್ವಾರಂಟೈನ್ನಲ್ಲಿ ಇರಲು ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಹಲವು ಬಾರಿ ಕೋರಿದ್ದಾರೆ. ಆದರೂ ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಂಥವರಿಗೆ ಮುಖಂಡರು ಬುದ್ದಿ ಹೇಳಿ, ಪರೀಕ್ಷೆಗೆ ಒಳಪಡಿಸಬೇಕು ಎಂದರು.
Comments