ದಯವಿಟ್ಟು ಸಹಾಯ ಮಾಡಿ ಭಾರತದ ನೆರವು ಕೋರಿದ ವಿಶ್ವದ ದೊಡ್ಡಣ್ಣ
ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದಲ್ಲಿನ ಕೊರೊನಾ ವೈರಸ್ ಪ್ರಕೋಪದ ಕುರಿತು ಶನಿವಾರ ಸಂಜೆ ಫೋನ್ ಮೂಲಕ ಸಂಬಾಷಣೆ ನಡೆಸಿದ್ದಾರೆ. ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ರವಾನಿಸಲು ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಭಾರತ ಈ ಔಷಧಿಯ ರಫ್ತಿಗೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೇರಿಕಾ ಈ ಮನವಿ ಮಾಡಿದೆ ಎನ್ನಲಾಗಿದೆ.
ಮಲೇರಿಯಾ ರೋಗಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಕರೊನಾ ಸೋಂಕು ಪೀಡಿತರಿಗೆ ನೀಡುವ ಬಗ್ಗೆ ನಾನು ವೈದ್ಯರೊಂದಿಗೆ ಚರ್ಚಿಸಿದ್ದೇನೆ. ವೈದ್ಯರು ಮಾತ್ರೆ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ. ಹೀಗಾಗಿ ಭಾರತಕ್ಕೆ ಮಾತ್ರೆ ರಫ್ತು ಮಾಡುವಂತೆ ಕೋರಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ಮುಂದಿನ 2 ವಾರಗಳಲ್ಲಿ ಅಮೆರಿಕಾದಲ್ಲಿ ಕರೊನಾ ವೈರಸ್ ಸೋಂಕಿನಿಂದ ಸಾಕಷ್ಟು ಸಾವು ಸಂಭವಿಸಬಹುದು. ಹೀಗಾಗಿ ಅಮೆರಿಕನ್ನರಿಗೆ ಮುಂದಿನ 2 ವಾರಗಳು ಕಠಿಣವಾಗಲಿವೆ. ಇದನ್ನು ಎದುರಿಸಲು ಎಲ್ಲರು ಸಜ್ಜಾಗಬೇಕು ಎಂದರು. ಕೆಲವು ಮುನ್ನೆಚ್ಚರಿಕೆ ತೆಗೆದುಕೊಂಡರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ಅಮೆರಿಕಾದಲ್ಲಿ 3 ಲಕ್ಷ ಮಂದಿಗೆ ಸೋಂಕು ಹರಡಿದೆ. ಇದರಲ್ಲಿ 8,291 ಮಂದಿ ಮೃತಪಟ್ಟಿದ್ದಾರೆ. ಇನ್ನಷ್ಟು ಸಾವು ಸಂಭವಿಸಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.
Comments