ದೇಶಾದ್ಯಂತ ಏಕತೆಯ ದೀಪ ಹಚ್ಚುವಾಗ ಲೈಟ್ ಫ್ಯಾನ್, ಫ್ರಿಜ್ ಅನ್ನು ಆಫ್ ಮಾಡಬಾರದು..!
ಕೋವಿಡ್ 19 ಹರಡದಂತೆ ತಡೆಯಲು ಇದೇ ಭಾನುವಾರ ಏಪ್ರಿಲ್ 5ನೇ ತಾರೀಕು ರಾತ್ರಿ 9 ಗಂಟೆಗೆ 9 ನಿಮಿಷ ದೀಪಗಳನ್ನು ಆಫ್ ಮಾಡಿ, ಎಣ್ಣೆದೀಪಗಳನ್ನು, ಮೊಂಬತ್ತಿಗಳು, ಮೊಬೈಲ್ಫೋನ್ನ ಫ್ಲ್ಯಾಶ್ಲೈಟ್ಗಳನ್ನು ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. . ಆದರೀಗ, ಪ್ರಧಾನಿ ಕರೆಯಂತೆ ಒಮ್ಮೆಲೇ ದೇಶಾದ್ಯಂತ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ಗಳು ಹಾಳಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದ್ದರಿಂದ, ದೀಪಗಳನ್ನು ಮಾತ್ರ ಆರಿಸಿ, ಫ್ರಿಜ್, ಟಿವಿ, ಕಂಪ್ಯೂಟರ್, ಫ್ಯಾನ್ಗಳನ್ನು ಎಂದಿನಂತೆ ಉರಿಸಬೇಕು ಎಂದು ವಿದ್ಯುತ್ ನಿಗಮಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿವೆ.
ವಿದ್ಯುತ್ ಸರಬರಾಜಿನಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ಟಿವಿ, ಫ್ರಿಜ್, ಎಸಿ, ಫ್ಯಾನ್, ಟಿವಿ, ಕಂಪ್ಯೂಟರ್ ಮತ್ತಿತರ ವಿದ್ಯುತ್ ಸಾಧನಗಳ ಬಳಕೆಯನ್ನು ಎಂದಿನಂತೆ ಮುಂದುವರಿಸಬೇಕು. ಹಾಗೂ ದೀಪಗಳನ್ನು ಮಾತ್ರ ಆರಿಸಬೇಕು ಎಂದು ಕೇಂದ್ರ ಇಂಧನ ಸಚಿವಾಲಯದ ವಕ್ತಾರರು ಸಲಹೆ ನೀಡಿದ್ದಾರೆ.
Comments