ನೈಸರ್ಗಿಕ ಅನಿಲಗಳ ಬೆಲೆಯಲ್ಲಿ ಶೇ.26ರಷ್ಟು ಮೊದಲ ಬಾರಿಗೆ ಭಾರೀ ಪ್ರಮಾಣದ ದರ ಕಡಿತಕ್ಕೆ ಮುಂದಾದ ಸರ್ಕಾರ

ಸಂಚಾರಿ ಆಟೋ ಸೇರಿದಂತೆ ಇತರೆ ಗೂಡ್ಸ್ ವಾಹನಗಳಿಗೆ ಬಳಸಲಾಗುವ CNG-PNG ನೈಸರ್ಗಿಕ ಅನಿಲಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಂದು ದಾಖಲೆಯ ಮಟ್ಟಕ್ಕೆ ಇಳಿಸಿದೆ. ಇದೇ ಮೊದಲ ಬಾರಿಗೆ ನೈಸರ್ಗಿಕ ಅನಿಲ ಬೆಲೆಯನ್ನು ಶೇ. 26 ರಷ್ಟು ಬೆಲೆ ಕಡಿತ ಮಾಡಿದೆ.
ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಬೇಡಿಕೆಯಿಂದಾಗಿ, ಕಚ್ಚಾ ತೈಲ (Crude Oil)ವು 17 ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಯುಎಸ್ನಲ್ಲಿ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ಬ್ಯಾರೆಲ್ಗೆ 5.3 ಶೇಕಡಾ ಇಳಿದು 20 ಡಾಲರ್ ಮುಟ್ಟಿದೆ. ಇದೇ ವೇಳೆ ಅಂತರರಾಷ್ಟ್ರೀಯ ಗುಣಮಟ್ಟದ ಬ್ರೆಂಟ್ ಕಚ್ಚಾ 6.5 ಶೇಕಡಾ ಇಳಿದು $ 23 ತಲುಪಿದೆ. ಕೊರೋನಾ ಭೀತಿಯಿಂದಾಗಿ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು ತೈಲ ಮತ್ತು ನೈಸರ್ಗಿಕ ಅನಿಲಗಳ ಮೇಲಿನ ಬೇಡಿಕೆ ಸಂಪೂರ್ಣವಾಗಿ ಶೂನ್ಯ ಮಟ್ಟ ತಲುಪಿದೆ. ಹೀಗಾಗಿ ಕೇಂದ್ರ ಸರ್ಕಾರ ನೈಸರ್ಗಿಕ ಅನಿಲಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ ಎನ್ನಲಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗೆ ಹೋಲಿಕೆ ಮಾಡಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇನ್ನೂ ಆ ಮಟ್ಟಿಗೆ ಇಳಿಸಲಾಗಿಲ್ಲ.
Comments