ಭಾರತ-ಅಮೆರಿಕ ಜತೆ ಬೃಹತ್ ರಕ್ಷಣಾ ಒಪ್ಪಂದ! ಭಯೋತ್ಪಾದಕರಿಗೆ ಟ್ರಂಪ್ ವಾರ್ನಿಂಗ್!

ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರ ಮುಂದುವರಿಯಲಿದೆ. ಭಾರತಕ್ಕೆ ನಾವು ಈ ಅತ್ಯಾಧುನಿಕ ಸೇನಾ ಶಸ್ತ್ರಾಸ್ತ್ರ ಮಾರಾಟ ಮಾಡಲು ಎದುರು ನೋಡುತ್ತಿದ್ದೇವೆ. ನಾವು ಈಗಾಗಲೇ ಹಲವು ಆಧುನಿಕ ಶಸ್ತ್ರಾಸ್ತ್ರ ತಯಾರಿಸಿದ್ದೇವೆ. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಬೃಹತ್ ಒಪ್ಪಂದ ನಡೆಯಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ದೇಶದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ಅಮೆರಿಕ ಜೊತೆಗೆ 3 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ಮಾಡಿಕೊಳ್ಳಲಿದೆ. ಮತ್ತಷ್ಟು ರಕ್ಷಣಾ ಸಾಮಗ್ರಿಗಳನ್ನು ಖರೀದಿ ಮಾಡುವ ಮೂಲಕ ಭಾರತ ರಕ್ಷಣಾ ವ್ಯವಸ್ಥೆಯನ್ನು ವಿಶ್ವ ದರ್ಜೆಗೆ ಏರಿಸಲಾಗುವುದು. ಅಲ್ಲದೆ, ಇಂದು ವಿಶ್ವಕ್ಕೆ ಬೆದರಿಕೆ ಒಡ್ಡಿರುವ ಭಯೋತ್ಪಾದನೆ ವಿರುದ್ಧ ಅಮೆರಿಕ ಮತ್ತು ಭಾರತ ಜಂಟಿಯಾಗಿ ಸಮರ ಸಾರಿದ್ದು, ಶಾಂತಿ ಪಾಲನೆಗಾಗಿ ಎರಡೂ ರಾಷ್ಟ್ರ ಶ್ರಮಿಸಲಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Comments