ಪಾಕ್ ಜಿಂದಾಬಾದ್ ಎಂದವಳು ನನ್ನ ಮಗಳೇ ಅಲ್ಲ ಎಂದ ಅಮೂಲ್ಯ ತಂದೆ
ಸಿಎಎ ಹಾಗೂ ಎನ್ಸಿಆರ್ ವಿರೋಧಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಸುದ್ದಿಗೆ ಗ್ರಾಸವಾಗಿರುವ ಯುವತಿ ಅಮೂಲ್ಯ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ವತಃ ಅಮೂಲ್ಯಳ ತಂದೆ ಕೂಡ ಅಮೂಲ್ಯ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅಮೂಲ್ಯ ನನ್ನ ಮಾತನ್ನು ಕೇಳುತ್ತಿರಲಿಲ್ಲ. ನನಗೆ ಆರೋಗ್ಯ ಸರಿಯಿಲ್ಲ ಮನೆಗೆ ಬಾ ಎಂದು ಹೇಳಿದ್ದರೂ ಬಂದಿರಲಿಲ್ಲ. ಅವಳು ಯಾಕೆ ಈ ರೀತಿ ಹೇಳಿದ್ದಾಳೆ ಎಂದು ಗೊತ್ತಿಲ್ಲ. ನಾನು ಅಜ್ಞಾನಿ ಅಲ್ಲ, ಅವಳಿಗೆ ತಿಳುವಳಿಕೆ ಹೇಳಿದ್ದೆ. ಪ್ರೊ. ಸಿದ್ದಲಿಂಗಯ್ಯರಿಂದಲೂ ತಿಳುವಳಿಕೆ ಹೇಳಿಸಿದ್ದೆ. ಆದರೂ ಅವಳು ಯಾರ ಮಾತನ್ನೂ ಕೇಳಿಲ್ಲ," ಅವಳು ನಮ್ಮ ಮಗಳೇ ಅಲ್ಲ. ಮಗಳ ಕೃತ್ಯವನ್ನು ನಾನು ಸಹಿಸುವುದಿಲ್ಲ ಅಂತ ಕಿಡಿಕಾರಿದ್ದಾರೆ.
Comments