ಬಸವ ತತ್ವಕ್ಕೆ ಮಾರುಹೋಗಿ ಲಿಂಗ ದೀಕ್ಷೆ ಪಡೆದ ಮುಸ್ಲಿಂ ವ್ಯಕ್ತಿ

ರೋಣ ತಾಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ವ್ಯಕ್ತಿಯೊಬ್ಬರು ಲಿಂಗ ದೀಕ್ಷೆ ಪಡೆದಿರುವ ಘಟನೆ ನಡೆದಿದೆ. ಬಸವ ತತ್ವಕ್ಕೆ, ಸಿದ್ದಾಂತಗಳಿಗೆ ಮಾರು ಹೋಗಿರುವ ಗದಗದ ಮುಸ್ಲಿಂ ವ್ಯಕ್ತಿ ಲಿಂಗ ದೀಕ್ಷೆಯನ್ನು ಪಡೆದು ಭಾವೈಕ್ಯತೆ ಸಾರಿದ್ದಾರೆ. ಎಂದು ವರದಿ ತಿಳಿಸಿದೆ.
ರೋಣದ ಅಸೂಟಿ ಗ್ರಾಮದ ಮುನ್ನಾ ಮುಲ್ಲಾ ಎಂಬ ವ್ಯಕ್ತಿ ಬಸವ ತತ್ವದ ಆಧಾರದ ಮೇಲೆ ಜೀವನ ನಡೆಸುವ ಇಚ್ಚೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಶ್ರೀಮಠದ ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳೂ ಲಿಂಗದೀಕ್ಷೆ ನೀಡಿದ್ದಾರೆ.
ಈಗಾಗಲೇ ದಿವಾನ್ ಶರೀಫ್ ಅವರಿಗೆ ಲಿಂಗಧೀಕ್ಷೆ ನೀಡಿದ್ದು, ಮುಂದಿನ ದಿನಗಳಲ್ಲಿ ಅಸೂಟಿ ಗ್ರಾಮದ ಖಜೂರಿ ಶ್ರೀಮಠ ಹಾಗೂ ಶಾಂತಿಧಾಮಕ್ಕೆ ಮುಸ್ಲಿಂ ಯುವ ದಿವಾನ್ ಶರೀಫರನ್ನು ಪೀಠಾಪತಿ ಮಾಡುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಲಬುರಗಿಯ ಖಾಜುರಿ ಗ್ರಾಮದಲ್ಲಿರುವ ಕೋರಣೇಶ್ವರ ಸಂಸ್ಥಾನ ಮಠಕ್ಕೆ 350 ವರ್ಷಗಳ ಇತಿಹಾಸ ಹೊಂದಿದ್ದು, ಅಸೋಟಿಯಲ್ಲಿರುವುದು ಇದರ ಶಾಖಾ ಮಠವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಇತರೆಡೆ ಲಿಂಗಾಯತ ಧರ್ಮಕ್ಕೆ ಲಕ್ಷಾಂತರ ಮಂದಿ ಅನುಯಾಯಿಗಳಿದ್ದಾರೆ.
Comments